ವಿಟ್ಲ: ವಿಟ್ಲ ಪೊಲೀಸ್ ಠಾಣೆಯ ಎಸೈ ರಾಮಕೃಷ್ಣ ಅವರ ಪುತ್ರ ಆದಿತ್ಯ ರಾಮ್ ಆರ್ ಎಂಬ ಬಾಲಕ
ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸಾಧಕ ಎಂದು ಗುರುತಿಸ್ಪಟ್ಟಿದ್ದಾನೆ.
ಕರ್ನಾಟಕ ರಾಜ್ಯ ರಾಮನಗರ ನಿವಾಸಿಯಾದ ರಾಮಕೃಷ್ಣ ಹಾಗೂ ದೀಪಿಕಾ ದಂಪತಿಗಳ ಪುತ್ರ ಆದಿತ್ಯ ರಾಮ್ ಆರ್ ಎಂಬ ಬಾಲಕ ಇಂಡಿಯಾ ಬುಕ್ ಆಫ್ ರೆಕರ್ಡ್ ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ..
ಈತ ಭಾರತದ 28ರಾಜ್ಯಗಳ ರಾಜಧಾನಿ, ಕರ್ನಾಟಕದ 31 ಜಿಲ್ಲೆಗಳು, ಮತ್ತು 12 ರಾಷ್ಟ್ರೀಯ ಚಿನ್ನೆಗಳನ್ನು ನೆನಪಿಸಿಕೊಳ್ಳುವ ಮೂಲಕ 23 ರಾಷ್ಟ್ರೀಯ ನಾಯಕರು 8 ಕನ್ನಡ ಜ್ಞಾನಪೀಠ ಪ್ರಶಸ್ತಿ ವಿಜೇತರ ಹೆಸರನ್ನು ಹೇಳುವ ಮೂಲಕ 16 ಹಣ್ಣುಗಳು, 32 ಪ್ರಾಣಿ ಗಳು, 12 ಆಕಾರಗಳು, 8 ಗೃಹಗಳು, ಹಿಂದಿ ವರ್ಣಮಾಲೆಯ ಅಕ್ಷರಗಳು ಮತ್ತು 24 ದೇಶಗಳ ಧ್ವಜಗಳನ್ನು ಗುರುಸುವ ಮೂಲಕ ಈ ಸಾಧನೆ ಮಾಡಿರುತ್ತಾರೆ. ಸೆಪ್ಟಂಬರ್ 22ರಂದು ಪ್ರಮಾಣ ಪತ್ರ ನೀಡಲಾಗಿದೆ.