ವಿಟ್ಲ: ಶಬೀರ್ ಅಲಿಯಾಸ್ ಚಬ್ಬಿ ಅವರ ನಿಕಾಹ್ ಕಾರ್ಯಕ್ರಮದಲ್ಲಿ ಗಲಭೆ ನಡೆದ ವಿಚಾರವಾಗಿ , ಪರಸ್ಪರ ಹಲ್ಲೆ ಪ್ರಕರಣಗಳು ದಾಖಲಾಗಿವೆ.
ಮಾಹಿತಿಯಂತೆ, ನಿಕಾಹ್ ಕಾರ್ಯಕ್ರಮಕ್ಕೆ ಹಾಜರಾಗಿದ್ದ ಅಬುಸಾಲಿ ಆದಂ ಕುನ್ಹಿ ಅವರಿಗೆ ಅಬ್ದುಲ್ ರಹೀಮಾನ್ ಅವರ ಪ್ರಚೋದನೆಗೆ ರೈಯೀಸ್ ರಾಡ್‌ನಿಂದ ಹಣೆಗೆ ಹೊಡೆದು ಗಾಯಗೊಳಿಸಿದ್ದಾನೆ. ಇತರ ಆರೋಪಿಗಳು ಸೇರಿ ಪಿರ್ಯಾದಿದಾರರನ್ನು ನೆಲಕ್ಕೆ ದೂಡಿ ತುಳಿದು, ಕಲ್ಲು ಎಸೆದು ಕಾಲಿಗೆ ಗಾಯಪಡಿಸಿದ ಪ್ರಕರಣದ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 142/2025, ৳ 118(1), 115(2), 351(2) r/w 190 BNS-2023 ಅಡಿಯಲ್ಲಿ ಪ್ರಕರಣ ದಾಖಲಾಗಿ, ಆರೋಪಿ ಅಹಮದ್ ರೈಯೀಸ್ ವಶಕ್ಕೆ ಪಡೆದು ತನಿಖೆ ನಡೆಯುತ್ತಿದೆ.
ಇದರ ವಿರುದ್ಧವಾಗಿ, ಅಹಮದ್ ರೈಯೀಸ್ ಕೂಡಾ ಪ್ರತಿ ದೂರು ನೀಡಿದ್ದು, ಅಲ್ಲಿ ಇದ್ದವರು ಸೇರಿ ತಮಗೆ ಹಲ್ಲೆ ನಡೆಸಿದ್ದಾರೆಂದು ದೂರಿದ್ದಾರೆ. ಈ ದೂರಿನ ಆಧಾರದಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 144/2025, 0 352, 118(1), 115(2), 351(2) r/w 3(5) BNS-2023 ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭವಾಗಿದೆ.