ಹಾವೇರಿ: ರಾಜ್ಯಾದ್ಯಂತ ಎಲ್ಲೆಡೆಗಳಲ್ಲಿ ಈಗ ಗಣೇಶ ವಿಸರ್ಜನೆ ಮುಕ್ತಾಯಗೊಂಡಿವೆ. ಅದರೆ ಹಾವೇರಿ ಜಿಲ್ಲೆಯ ಬಂಕಾಪುರ ಹಿಂದೂ ಮಹಾಸಭಾ ಗಣಪತಿ ಡಿಜೆ ಅವಕಾಶ ನೀಡದ ಹಿನ್ನಲೆ, 43 ದಿನಗಳು ಕಳೆದರೂ ವಿಸರ್ಜನೆ ಮಾಡಿಲ್ಲ. ಇದರಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಗಣೇಶ ಕಮೀಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯಾದ್ಯಂತ ಎಲ್ಲೆಡೆ ಇದೀಗ ಗಣೇಶ ವಿಸರ್ಜನೆ ಮುಕ್ತಾಯಗೊಂಡಿವೆ. ಆದರೆ ಹಾವೇರಿ ಜಿಲ್ಲೆಯ ಬಂಕಾಪುರ ಪಟ್ಟಣದಲ್ಲಿ ಡಿಜೆಗೆ ಅವಕಾಶ ನೀಡದ ಹಿನ್ನಲೆ, 43 ದಿನಗಳು ಕಳೆದರೂ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಮಾಡಿಲ್ಲ. ಪೊಲೀಸ್ ಇಲಾಖೆಗೆ ನಮಗೆ ಅನುಮತಿ ನೀಡಬೇಕು. ಇಲ್ಲಾದರೆ ಗಣಪತಿ ವಿಸರ್ಜನೆ ಮಾಡುವುದಿಲ್ಲ. 42 ವರ್ಷಗಳಿಂದ ಗಣಪತಿ ಪ್ರತಿಷ್ಠಾಪನೆ ಮಾಡಿಕೊಂಡು ಬರುತ್ತಿದ್ದೇವೆ. ಯಾವುದೇ ಗದ್ದಲ, ಗಲಾಟೆ ಆಗಿಲ್ಲ. ಈ ವರ್ಷ ಮಾತ್ರ ಹಿಂದೂ ಮಹಾಸಭಾ ಗಣಪತಿ ಅಂದರೆ ಎಲ್ಲಾ ಕಾನೂನು ಬರುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಪ್ರಸಿದ್ದ ಮೂರ್ತಿಗಳಲ್ಲಿ ಒಂದಾದ, ಬಂಕಾಪುರದ ಹಿಂದೂ ಮಹಾಸಭಾ ಗಣಪತಿ ಮೂರ್ತಿ ವಿಸರ್ಜನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ವಿಸರ್ಜನೆ ಸಂದರ್ಭದಲ್ಲಿ ಡಿ.ಜೆ. ವಿಚಾರವಾಗಿ ಹಲವು ದಿನಗಳಿಂದ ಚರ್ಚೆ ನಡೆಯುತ್ತಿದೆ. ಆದರೆ, ಪೊಲೀಸರು ಡಿ.ಜೆ.ಗೆ ಅವಕಾಶವಿಲ್ಲವೆಂದು ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ಬಂಕಾಪುರ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ ಮಾಡಿ, 43 ದಿನ ಕಳೆದರೂ ವಿಸರ್ಜನೆಗೆ ಮುಂದಾಗಿಲ್ಲ. ಈಗ ಡಿಜೆಗಾಗಿ ಗಣೇಶ್ ಉತ್ಸವ ಸಮಿತಿ ಬಿಗಿಪಟ್ಟು ಹಿಡಿದು ಕುಳಿತಿದೆ. ಗಣಪತಿ ವಿಸರ್ಜನೆ ಯಾವಾಗ ಮಾಡುತ್ತಾರೆ ಅನ್ನೋದು ಕಾದು ನೋಡಬೇಕಾಗಿದೆ.