ಶ್ರೀಮತಿ ರೇವತಿ ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ:12.10.2025 ರಂದು ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 05-00 ಗಂಟೆಯ ಮಧ್ಯಾವದಿಯಲ್ಲಿ ತನ್ನ ವಾಸದ ಮನೆಯಿಂದ ಯಾರೋ ಕಳ್ಳರು ಚಿನ್ನದ ಬಳೆ-01, ಕಿವಿಯೋಲೆ-01 ಜೊತೆ, ಚಿನ್ನದ ಸರ-01 ಹಾಗೂ ನಗದು ಹಣ ಕಳುವಾದ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ 89/2025 ಕಲಂ:331 (3), 305 ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ ಆರೋಪಿ ಪ್ರವೀಣ್ (27) ಸಿಟಿ ಗುಡ್ಡೆ ಮನೆ , ಕಬಕ ಗ್ರಾಮ ಪುತ್ತೂರು ತಾಲೂಕು ಎಂಬಾತನನ್ನು ಪತ್ತೆಮಾಡಿ ವಶಕ್ಕೆ ಪಡೆದು ಕಳವು ಮಾಡಿದ ಚಿನ್ನಾಭರಣ ಹಾಗೂ ನಗದು ಹಣವನ್ನು ವಶಕ್ಕೆ ಪಡೆಯಾಲಾಗಿದೆ.
ಆರೊಪಿಯನ್ನು ಮಾನ್ಯನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.