ಪುತ್ತೂರು: ನಗರಸಭೆ ವ್ಯಾಪ್ತಿಯ ಬೆದ್ರಾಳ ಸಮೀಪದ ನೆಲ್ಲಿಗೇರಿ ಎಂಬಲ್ಲಿ ಸಿಡಿಲು ಬಡಿದು ಮನೆಯಲ್ಲಿದ್ದ ಮಗು ಸಹಿತ ನಾಲ್ವರು ಅಸ್ವಸ್ಥಗೊಂಡ ಮತ್ತು ಮನೆ ಸಂಪೂರ್ಣ ಹಾನಿಯಾದ ಘಟನೆ ಅ.19ರಂದು ಸಂಜೆ ನಡೆದಿದೆ.
ಬೆದ್ರಾಳ ಸಮೀಪದ ನೆಲ್ಲಿಗೇರಿ ದಯಾನಂದ ಕುಲಾಲ್ ಅವರ ಹಂಚಿನ ಮನೆಗೆ ಸಂಜೆ ಸಿಡಿಲು ಬಡಿದಿದೆ. ಸಿಡಿಲಿನ ಆರ್ಭಟಕ್ಕೆ ಮನೆಯ ಗೋಡೆ ಬಿರುಕು ಬಿಟ್ಟು ಕಲ್ಲುಗಳು ಜಾರಿವೆ. ಹಂಚುಗಳು, ಶೀಟ್‌ಗಳು ತುಂಡಾಗಿ ಬಿದ್ದಿವೆ.
ನೀರಿನ ಬ್ಯಾರೆಲ್ ಪೂರ್ಣ ಸುಟ್ಟುಹೋಗಿದೆ. ಮನೆಯೊಳಗಿದ್ದ ದಯಾನಂದ ಅವರ 1 ವರ್ಷದ ಮಗು, ತಾಯಿ ಲಕ್ಷ್ಮೀ, ಪತ್ನಿ ರಕ್ಷಿತಾ ಅವರು ಅಸ್ವಸ್ಥಗೊಂಡಿದ್ದಾರೆ.
ಎಲ್ಲರನ್ನೂ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
























