ಮಂಗಳೂರು: ಸುರತ್ಕಲ್‌ನ ದೀಪಕ್ ಬಾರ್ ಬಳಿ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಚೂರಿ ಇರಿದ ಘಟನೆ ಅ.23 ರಂದು ರಾತ್ರಿ ವರದಿಯಾಗಿದೆ.
ಮುಕ್ಷಿದ್ , ನಿಜಾಮ್ ಮತ್ತು ಇತರ ಇಬ್ಬರು ಬಾರ್‌ಗೆ ಹೋಗಿ ಮದ್ಯ ಸೇವಿಸುತ್ತಿದ್ದರು ಈ ಸಂದರ್ಭ ಅಲ್ಲಿದ್ದ ನಾಲ್ಕು ಜನರ ತಂಡದ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ.
ಈ ಸಂದರ್ಭ ಓರ್ವ ನಿಜಾಮ್ ಹೊಟ್ಟೆಯ ಮತ್ತು ಕಿವಿಯ ಭಾಗಕ್ಕೆ ಫ್ಲೆಕ್ಸ್ ಕಟ್ ಮಾಡಲು ಬಳಸುವ ಚಾಕುವಿನಿಂದ ಇರಿದಿದ್ದಾನೆ ಈ ಸಂದರ್ಭ ಮುಕ್ಷಿದ್ ನ ಕೈಗೂ ಗಾಯಗಳಾಗಿವೆ.
ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆ ಯಲ್ಲಿ ನಾಲ್ವರ ವಿರುದ್ಧ 307 ಪ್ರಕರಣ ದಾಖಲಾಗಿದೆ.
ಗಾಯಾಳುಗಳ ಮಾಹಿತಿ ಪ್ರಕಾರ ಹಲ್ಲೆ ಮಾಡಿದವರನ್ನು
ಗುರುರಾಜ್ , ಅಲೆಕ್ಸ್ ಸಂತೋಷ್
ಸುಶಾಂತ್,ನಿತಿನ್ ಎಂದು ಗುರುತಿಸಲಾಗಿದೆ.
ಸದ್ಯ ಅವರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.




























