ಪುತ್ತೂರು: ಬೆನಕ ಈವೆಂಟ್ಸ್ ಕುಂದಾಪುರ ಇದರ ಆಶ್ರಯದಲ್ಲಿ ಬೃಹತ್ ಆಹಾರ ಮತ್ತು ಸ್ವದೇಶಿ ಮೇಳ ಅ.31 ರಿಂದ ನ.03 ರವರೆಗೆ ಮುಖ್ಯರಸ್ತೆಯ ಅರುಣ ಕಲಾಮಂದಿರದಲ್ಲಿ ನಡೆಯಲಿದೆ.
ಈ ಮೇಳದಲ್ಲಿ ನೈಸರ್ಗಿಕ ಸೌಂದರ್ಯ ವರ್ದಕಗಳು, ಖಾದಿ ಉತ್ಪನ್ನಗಳು, ದೇಶಿಯ ಆಹಾರಗಳು, ನಿತ್ಯ ಬಳಕೆ ವಸ್ತುಗಳು, ಸಾವಯವ ಉತ್ಪನ್ನಗಳು, ಸಿರಿಧಾನ್ಯಗಳು, ಆಯುರ್ವೇದ ಉತ್ಪನ್ನಗಳು, ಫ್ಯಾನ್ಸಿ ಸೀರೆಗಳು, ಗೃಹ ಅಲಂಕಾರಿಕ ವಸ್ತುಗಳು, ರೆಡಿಮೇಡ್ ಡ್ರೆಸ್ ಗಳು, ಚನ್ನಪಟ್ಟಣದ ಗೊಂಬೆಗಳು, ಇಳಕಲ್ ಸೀರೆಗಳು, ವನ್ ಗ್ರಾಂ ಗೋಲ್ಡ್ ಜ್ಯುವೆಲ್ಲರಿ, ಮಕ್ಕಳ ಉಡುಪುಗಳು, ಹಪ್ಪಳ ಮತ್ತು ಸಂಡಿಗೆ, ಆದಿವಾಸಿ ಹೇರ್ ಆಯಿಲ್, ಹೋಮ್ ಮೇಡ್ ಕಾಂಡಿಮೆಂಟ್ಸ್ ಮತ್ತು ಉಪ್ಪಿನಕಾಯಿ, ಉತ್ತರ ಮತ್ತು ದಕ್ಷಿಣ ಭಾರತದ ಆಹಾರಗಳು, ಇನ್ನೂ ಇತರ ಉತ್ಪನ್ನಗಳು ಲಭ್ಯವಿರಲಿದೆ.
ಬೆಳಗ್ಗೆ 10 ರಿಂದ ರಾತ್ರಿ 10 ರ ವರೆಗೆ ಈ ಮೇಳ ಇರಲಿದ್ದು ಲೈವ್ ಜಿಲೇಬಿ ಹೋಳಿಗೆ ಸ್ಟಾಲ್ ಗಳು ಇನ್ನಷ್ಟು ಮೆರುಗು ನೀಡಲಿದೆ.
ಇನ್ನು ಇಲ್ಲಿ ಹಲಸು , ಮಾವು, ಹೂವಿನ ಗಿಡ, ಗೆಡ್ಡೆಗಳು ತರಕಾರಿ ಬೀಜ ಹಾಗೂ ಹಲವು ಅನೇಕ ಗಿಡಗಳು ದೊರೆಯುತ್ತದೆ ಮತ್ತು ನಿಮ್ಮ ಹಳೆಯ ಜರಿ ಸೀರೆಗಳನ್ನು ಖರೀದಿಸಿ ತಕ್ಷಣ ಹಣ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.




























