ಕೇಪು ಗ್ರಾಮದ ನೀರ್ಕಜೆಯಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿಯ ಅನುದಾನದಲ್ಲಿ ನಿರ್ಮಿಸಲಾಗಿರುವ ರಿಕ್ಷಾ ತಂಗುದಾಣವನ್ನು ಮತ್ತು ಕೇಪು ಉಳ್ಳಾಲ್ತಿ ದೇವಾಸ್ಥಾನ ರಸ್ತೆಗೆ ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾದ ಕ್ಯಾಪ್ಟನ್ ಬ್ರಿಜೇಶ್ ಚೌಟರವರ ಅನುದಾನ ರೂ 5ಲಕ್ಷದಲ್ಲಿ ನಿರ್ಮಾಣವಾಗಿರುವ ಕಾಂಕ್ರೀಟ್ ರಸ್ತೆಯನ್ನು ಮಾನ್ಯ ವಿಧಾನಪರಿಷತ್ತಿನ ಶಾಸಕರಾದ ಕಿಶೋರ್ ಕುಮಾರ್ ಬೊಟ್ಯಾಡಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಾಘವ ಮಣಿಯಾಣಿ, ಉಪಾಧ್ಯಕ್ಷರಾದ ಹೇಮಾವತಿ,ಪದ್ಮಶ್ರೀ ಪುರಸ್ಕೃತ ಮಹಾಲಿಂಗ ನಾಯ್ಕ್ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ದಯಾನಂದ ಶೆಟ್ಟಿ, ಉಪಾಧ್ಯಕ್ಷರುಗಳಾದ ಬಿ.ಹರಿಪ್ರಸಾದ್ ಯಾದವ್, ಸುನಿಲ್ ದಡ್ಡು, ವಿದ್ಯಾದರ್ ಜೈನ್, ಪುಣಚ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ರಾಜೇಶ್ ಬಾಳೆಕಲ್ಲು,ಮಹಿಳಾ ಮೋರ್ಚ ಜಿಲ್ಲಾ ಕಾರ್ಯದರ್ಶಿ ಯಶಸ್ವೀನಿ ಶಾಸ್ತ್ರಿ,ಶಕ್ತೀ ಕೇಂದ್ರ ಸಂಚಾಲಕರಾದ ರಾಜೇಶ್ ಕರವೀರ ಪುಣಚ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಜನಾರ್ಧನ್ ಭಟ್, ನಿರ್ದೇಶಕರುಗಳಾದ ತಾರನಾಥ ಆಳ್ವಾ, ಪಾರ್ಟಿಯ ಪ್ರಮುಖರಾದ ರಾಧಾಕೃಷ್ಣ ಶೆಟ್ಟಿ, ರಾಮಚಂದ್ರಮಣಿಯಾಣಿ, ಪುಷ್ಪಾಕರ ರೖ,ಪಂಚಾಯತ್ ಸದಸ್ಯರಾದ ಪುರುಷೋತ್ತಮ ಗೌಡ,ಜಗಜ್ಜೀವನ್ ರಾಮ್ ಶೆಟ್ಟಿ,ಮೋಹಿನಿ,ವಿಶಾಲಾಕ್ಷೀ,ವನಿತ,ಜಯಶೀಲ,ಧರ್ಮಲತಾ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನುಷ,ಪಾರ್ಟಿಯ ಬೂತಿನ ಅಧ್ಯಕ್ಷರು,ಕಾರ್ಯಕರ್ತರು ಉಪಸ್ಥಿತರಿದ್ದರು.
ಪಂ.ಸದಸ್ಯರಾದ ಚಂದ್ರಶೇಖರ ಸ್ವಾಗತಿಸಿ,ಪಂ.ಸದಸ್ಯರಾದ ಸಂತೋಷ್ ಧನ್ಯವಾದಗೖದರು ಮಾಜಿ ಪಂಚಾಯತ್ ಅಧ್ಯಕ್ಷರಾದ ಬಾಲಚಂದ್ರ ಕಟ್ಟೆ ಕಾರ್ಯಕ್ರಮವನ್ನು ನಿರೂಪಿಸಿದರು.




























