ಧರ್ಮಸ್ಥಳ: ಇಲ್ಲಿಯ ಕನ್ಯಾಡಿ ಸಮೀಪ ಕಾರು ಹಾಗೂ ಬೈಕ್ ನಡುವೆ ಡಿಕ್ಕಿಯಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಅ.28ರಂದು ವರದಿಯಾಗಿದೆ.
ಧರ್ಮಸ್ಥಳ ಕಡೆಯಿಂದ ಬರುತ್ತಿದ್ದ ಕಾರು ಹಾಗೂ ಉಜಿರೆಯಿಂದ ಧರ್ಮಸ್ಥಳ ಕಡೆಗೆ ಹೋಗುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಬೈಕ್ ಸವಾರ ನಾವೂರಿನ ಹೊಡಿಕ್ಕಾರು ನಿವಾಸಿ ಕಬ್ಬಡಿ ಕ್ರೀಡಾಪಟು ಚಂದ್ರಹಾಸ(28) ಅವರಿಗೆ ತಲೆ ಹಾಗೂ ಕಾಲಿಗೆ ಬಲವಾದ ಗಾಯಗೊಂಡಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಅವಿವಾಹಿತರಾದ ಅವರು ಬೆಳಿಗ್ಗೆ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದು ಮನೆಯ ಆಧಾರಸ್ತಂಭವಾಗಿದ್ದು ತಂದೆ ಗಂಗಯ್ಯ, ತಾಯಿ ಕುಸುಮ ಹಾಗೂ ಇಬ್ಬರು ಸಹೋದರಿಯರಾದ ಲೀಲಾವತಿ, ಸುಮಲತಾರವರನ್ನು ಅಗಲಿದ್ದಾರೆ.



























