ಗೌರವಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲು, ನಿತ್ಯಾನಂದ ಮುಂಡೋಡಿ
ಅಧ್ಯಕ್ಷರಾಗಿ ಡಾ.ನರಸಿಂಹ ಶರ್ಮ ಕಾನಾವು, ಸಂಚಾಲಕರಾಗಿ ಕುಂಬ್ರ ದಯಾಕರ ಆಳ್ವ
ಪ್ರಧಾನ ಕಾರ್ಯದರ್ಶಿಯಾಗಿ ಜಗನ್ನಾಥ ಪೂಜಾರಿ ಮುಕ್ಕೂರು, ಕೋಶಾಧಿಕಾರಿಯಾಗಿ ರಾಮಚಂದ್ರ ಚೆನ್ನಾವರ
ಮುಕ್ಕೂರು : ಹತ್ತನೇ ವರ್ಷದ ಹೊಸ್ತಿಲಿನಲ್ಲಿರುವ ಮುಕ್ಕೂರು ನೇಸರ ಯುವಕ ಮಂಡಲದ ದಶ ಪ್ರಣತಿ-2026 ಇದರ ಸಮಿತಿ ರಚನೆ ನಡೆಯಿತು.
ಸಮಿತಿಯ ಗೌರವಾಧ್ಯಕ್ಷರಾಗಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಅಧ್ಯಕ್ಷರಾಗಿ ಡಾ.ನರಸಿಂಹ ಶರ್ಮ ಕಾನಾವು, ಸಂಚಾಲಕರಾಗಿ ಕುಂಬ್ರ ದಯಾಕರ ಆಳ್ವ, ಪ್ರಧಾನ ಕಾರ್ಯದರ್ಶಿಯಾಗಿ ಜಗನ್ನಾಥ ಪೂಜಾರಿ ಮುಕ್ಕೂರು, ಕೋಶಾಧಿಕಾರಿಯಾಗಿ ರಾಮಚಂದ್ರ ಚೆನ್ನಾವರ ಆಯ್ಕೆಯಾದರು.
ಸಮಿತಿ ಉಪಾಧ್ಯಕ್ಷರಾಗಿ ಉಮೇಶ್ ರಾವ್ ಕೊಂಡೆಪ್ಪಾಡಿ, ನರಸಿಂಹ ತೇಜಸ್ವಿ ಕಾನಾವು, ಸುಬ್ರಾಯ ಭಟ್ ನೀರ್ಕಜೆ, ಚಂದ್ರಹಾಸ ರೈ ಮುಕ್ಕೂರು, ಸಂತೋಷ್ ಕುಮಾರ್ ರೈ ಕಾಪು, ದಾಮೋದರ ಗೌಡ ಕಂಡಿಪ್ಪಾಡಿ, ಉಮೇಶ್ ಕೆಎಂಬಿ, ಸಂಪತ್ ಕುಮಾರ್ ರೈ ಪಾತಾಜೆ, ಜಯಂತ ಕೊಡಂಗೆ ಅವರನ್ನು ಆಯ್ಕೆ ಮಾಡಲಾಯಿತು.
ಸಮಿತಿಯ ಮುಖ್ಯ ಸದಸ್ಯರಾಗಿ ಮೋಹನ ಬೈಪಡಿತ್ತಾಯ, ಅಶ್ವಿನಿ ಕೋಡಿಬೈಲು, ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಗುಲಾಬಿ ಬೊಮ್ಮೆಮಾರು, ಗುಡ್ಡಪ್ಪ ಗೌಡ ಅಡ್ಯತಕಂಡ, ಜೈನುದ್ದೀನ್ ತೋಟದಮೂಲೆ, ಕೃಷ್ಣಪ್ಪ ನಾಯ್ಕ ಅಡ್ಯತಕಂಡ, ಕೃಷ್ಣಪ್ಪ ಜರಿಯಡ್ಕ ಅವರನ್ನು ಆಯ್ಕೆ ಮಾಡಲಾಯಿತು.




























