ಕಾವೂರು ಠಾಣಾ ವ್ಯಾಪ್ತಿಯ ಹಲವಾರು ಜನರಿಗೆ ವಿದೇಶದಲ್ಲಿ ಉದ್ಯೋಗಕ್ಕಾಗಿ ವೀಸಾ ಕೊಡಿಸುವುದಾಗಿ ನಂಬಿಸಿ ಸುಮಾರು 01 ಕೋಟಿ ರೂ ಹಣವನ್ನು ಪಡೆದುಕೊಂಡು ಉದ್ಯೋಗವನ್ನು ಕೊಡಿಸದೆ ನಂಬಿಸಿ, ಮೋಸ ಮಾಡುತ್ತಿದ್ದ ಆರೋಪಿಗಳ ಬಗ್ಗೆ ನೀಡಿದ ದೂರಿನಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 131/2025 ಕಲಂ. 406, 420 ಜೊತೆಗೆ 149 ಐಪಿಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.
ಆರೋಪಿಗಳ ಹೆಸರು ಮತ್ತು ವಿಳಾಸ
- ಪ್ರಕೃತಿ ಯು (34) ತಂದೆ: ಟಿ ಉಪೇಂದ್ರ, ವಾಸ: ಮನೆ ನಂಬ್ರ: #41 ವಿವರ್ಸ್ ಕಾಲೋನಿ, ಮುನಿರಾಜು ಬಿಲ್ಡಿಂಗ್. ಆನೇಕಲ್ ಪಬ್ಲಿಕ್ ಸ್ಕೂಲ್ ಬಳಿ, ಆನೇಕಲ್ ತಾಲೂಕು ಬೆಂಗಳೂರು-562106.
- ಆಲ್ಟನ್ ರೆಬೇರೋ (42) ತಂದೆ:ಆಗಸ್ಟಿನ್ ರೆಬೆರೋ, ವಾಸ: ಮನೆ ನಂಬ್ರ:10/43 ಚರ್ಚ್ ರೋಡ್, ಗಂಗೊಳ್ಳಿ ಕುಂದಾಪುರ. ಉಡುಪಿ ತಾಲೂಕು -576216.
ಆರೋಪಿತರುಗಳು ಇದೇ ರೀತಿ ಇನ್ನೂ ಸಹ ಹಲವಾರು ಜನರಿಗೆ ವಿಸಾ ಕೆಲಸ ಕೊಡುವುದಾಗಿ ನಂಬಿಸಿ ಅವರಿಂದ ಪಾಸ್ ಪೋರ್ಟ್‌ಗಳನ್ನು ಪಡೆದುಕೊಂಡು ಅವರ ಮನೆಯಲ್ಲಿ ಅಕ್ರಮವಾಗಿ ಇರಿಸಿಕೊಂಡಿದ್ದ ಸುಮಾರು 24 ಪಾಸ್ ಪೋರ್ಟ್‌ಗಳು, 43 ಗ್ರಾಂ ಬಂಗಾರ ಇದರ ಅಂದಾಜು ಮೌಲ್ಯ:4.30.000/- ಮತ್ತು 02 ಮೊಬೈಲ್‌ಗಳನ್ನು ಬೆಂಗಳೂರಿನಲ್ಲಿ ಸ್ವಾಧೀನಪಡಿಸಿಕೊಂಡು ಆರೋಪಿತರುಗಳನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾದ ಮುಂದೆ ಹಾಜರುಪಡಿಸಲಾಗಿದೆ.
ಈ ಮೇಲಿನ ಆರೋಪಿತರನ್ನು ಮಂಗಳೂರು ಉತ್ತರ ಉಪವಿಭಾಗದ ಎ.ಸಿ.ಪಿ. ಶ್ರೀಕಾಂತ್ ಕೆ. ರವರ ಮಾರ್ಗದರ್ಶನದಂತೆ ಕಾವೂರು ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ರಾಘವೇಂದ್ರ ಎಂ. ಬೈಂದೂರು ರವರು, ಪೊಲೀಸ್ ಉಪ-ನಿರೀಕ್ಷಕರಾದ ಶ್ರೀ ಮಲ್ಲಿಕಾರ್ಜುನ ಬಿರಾದಾರ ಹಾಗೂ ಕಾವೂರು ಠಾಣಾ ಸಿಬ್ಬಂದಿಗಳಾದ ಹೆಚ್.ಸಿ ಗಳಾದ ನಾಗರತ್ನ, ಪಿ.ಸಿ.ಗಳಾದ, ರಾಘವೇಂದ್ರ, ಪ್ರವೀಣ್, ರಿಯಾಜ್, ರವರುಗಳೊಂದಿಗೆ ಆರೋಪಿತರನ್ನು ಪತ್ತೆಮಾಡಿ ದಸ್ತಗಿರಿ ಮಾಡಲಾಗಿರುತ್ತದೆ.




























