ಮಾಜಿ ಸಚಿವರಾದ ಶ್ರೀ ಬಿ.ರಮಾನಾಥ ರೈ ರವರ ಶಿಫಾರಸ್ಸಿನ ಮೇಲೆ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸೌಮ್ಯ ರೆಡ್ಡಿ ರವರ ಆದೇಶದಂತೆ ದ.ಕ.ಜಿಲ್ಲಾ ಗ್ರಾಮಾಂತರ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಉಷಾ ಅಂಚನ್ ರವರು ಜಯಂತಿ ವಿ.ಪೂಜಾರಿ ರವರನ್ನು ದ.ಕ ಜಿಲ್ಲಾ ಗ್ರಾಮಾಂತರ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷರಾಗಿ ನೇಮಕಮಾಡಿರುತ್ತಾರೆ.
ಇವರು ಪ್ರಸ್ತೂತ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಬಂಟ್ವಾಳ ತಾಲೂಕು ಇದರ ಅಧ್ಯಕ್ಷರಾಗಿ ಕರ್ನಾಟಕ ರಾಜ್ಯದಲ್ಲಿಯೇ ಏಕೈಕ ಮಹಿಳಾ ಅಧ್ಯಕ್ಷರಾಗಿದ್ದು ರಾಜ್ಯದಲ್ಲಿಯೇ ಗ್ಯಾರಂಟಿ ಕಾರ್ಯಕ್ರಮಗಳ ಸಂಘಟನೆಯಲ್ಲಿ ನಂ 1 ಸ್ಥಾನದಲ್ಲಿದ್ದರೆ.ಇವರ ನೇತೃತ್ವದಲ್ಲಿ ಬಂಟ್ವಾಳ ತಾಲೂಕಿನ 51 ಗ್ರಾ.ಪಂ ವ್ಯಾಲ್ತಿಯ 10 ವಲಯಗಳಲ್ಲಿ ಹಾಗೂ ಒಂದು ಪುರಸಭೆ,ಒಂದು ಪಟ್ಟಣ ಪಂಚಾಯತ್ ಗಳಲ್ಲಿ ಗ್ಯಾರಂಟಿ ಯೋಜನೆಗಳ ನೋದವಣೆ ಮತ್ತು ತಿರಸ್ರ್ಕತ ಅರ್ಜಿಗಳ ವಿಲೇವರಿ ಶಿಬಿರ ಅಯೋಜಿಸಿದ್ದರು.ಶಕ್ತಿ ಯೋಜನೆಗೆ 500 ಕೋಟಿ ಫಲಾನುಭವಿಗಳು ಅದಾ ಪ್ರಯುಕ್ತ ಶಕ್ತಿ ಸಂಭ್ರ,ಸರ್ಕಾರಕ್ಕೆ 2 ವರುಷ ತುಂಬಿದ ಪ್ರಯುಕ್ತ ಪಂಚ ಗ್ಯಾರಂಟಿ ಬಂಟ್ವಾಳ ಸಂಭ್ರಮೋತ್ಸವ,ಆಟಿ ತಮ್ಮಣ,ಉಚಿತ ಆರೋಗ್ಯ ಶಿಬಿರ, ದುಶ್ಚಟ ಮುಕ್ತ ಸಮಾಜ ಜನಜಾಗೃತಿ ಕಾರ್ಯಕ್ರಮ,ಯುವ ನಿಧಿ ನೊಂದಾವಣೆ ಯ ಬಗ್ಗೆ ಪ್ರಚಾರ ಹಾಗೂ ಶಿಬಿರ,ವನಮಹೋತ್ಸವ,ಕಾರ್ಯಕ್ರಮಗಳನ್ನು ಅಯೋಜಿಸಿದ್ದರು.ಅಲ್ಲದೆ ಕರ್ನಾಟಕ ರಾಜ್ಯದಲ್ಲಿಯೇ ಪ್ರಥಮವಾಗಿ ಗೃಹಲಕ್ಷಿ ಫಲಾನುಭವಿಗಳ ಸ್ವಸಹಾಯ ಸಂಘ ವನ್ನು ರಚನೆ ಬಂಟ್ವಾಳದಲ್ಲಿ ಉದ್ಘಾಟನೆ ಮಾಡಿ ಸುಮಾರು 60 ಸ್ವ ಸಹಾಯ ಸಂಘಗಳ ರಚನೆ ಮಾಡಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯಧ್ಯಕ್ಷರಾದ ಎಚ್.ಎಂ.ರೇವಣ್ಣ ನವರಿಂದ ಪ್ರಶಂಸೆ ಗೆ ಪಾತ್ರರಾಗಿರುತ್ತಾರೆ.
ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತೆ
ರಮಾನಾಥ ರೈ ರವರ ಮಾರ್ಗದರ್ಶನದಲ್ಲಿ ಸುಮಾರು 9 ವರುಷ ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ 2 ಬಾರಿ ಮಹಿಳಾ ಕಾಂಗ್ರೆಸ್ ಸಮಾವೇಶ,ಇಂಧಿರಾ ಗಾಂಧಿ ಜಯಂತಿ ಪ್ರಯುಕ್ತ ಆಶ್ರಮಗಳಿಗೆ ಆಹಾರ ಸಾಮಾಗ್ರಿ ವ್ಯವಸ್ಥೆ, ಮಾಸಿಕ ಸಭೆ,ವಲಯ ಮಹಿಳಾ ಸಭೆಗಳನ್ನು ಅಯೋಜಿಸಿದ್ದರು,ಗ್ರಾಮವಾಸ್ತವ್ಯದಂತ ಕಾರ್ಯಕ್ರಮಗಳನ್ನು ಅಯೋಜಿಸಿದ್ದರು.ದ.ಕ ಜಿಲ್ಲಾ ಕೆಡಿಪಿ ಮಾಜಿ ಸದಸ್ಯರಾಗಿ,ಪ್ರಸ್ತುತ ದ.ಕ ಜಿಲ್ಲಾ ಕಾಂಗ್ರೆಸ್ ನ ಸದಸ್ಯರಾಗಿಯು ಇರುತ್ತಾರೆ.
ಶಿವಗಿರಿ ಮಹಿಳಾ ಸಹಕಾರಿ ಸಂಘ ನಿ.ಮೇಲ್ಕಾರ್ ಇದರ ಸ್ಥಾಪಕ ಅಧ್ಯಕ್ಷರಾಗಿ ಸಂಘವನ್ನು ಮುನ್ನಡೆಸುತ್ತಿರುತ್ತಾರೆ.




























