ದಿನಾಂಕ 15/10/2025 ರಂದು ಸಂಜೆ 5.00 ಗಂಟೆಗೆ ದೊರೆತ ಖಚಿತ ಮಾಹಿತಿಯಂತೆ ಮೂಡಬಿದ್ರೆ ತಾಲೂಕು ಹೊಸ್ಮಾರು ನೆಲ್ಲಿಕಾರು ಕಡೆಯಿಂದ ಆರೋಪಿಗಳಾದ ಮನ್ಸೂರ್ ಅದ್ಯಪಾಡಿ @ ಮೊಹಮ್ಮದ್ ಮನ್ಸೂರ್, ಮೊಹಮ್ಮದ್ ಅಶ್ಫಕ್, ಅಬ್ದುಲ್ ಮೊಹಮ್ಮದ್ ನಿಶಾಮ್ ಮತ್ತು ಇತರರು ಟಾಟಾ ಎಸಿ ಕಂಟೈನರ್ ವಾಹನವೊಂದರಲ್ಲಿ ಅಕ್ರಮವಾಗಿ 3 ಜಾನುವಾರುಗಳನ್ನು ಸಾಗಾಟ ಮಾಡಿಕೊಂಡು ಬರುತ್ತಿದ್ದು, ಅದರಲ್ಲಿ ಮನ್ಸೂರ್ ಅದ್ಯಪಾಡಿ @ ಮೊಹಮ್ಮದ್ ಮನ್ಸೂರ್, ಮೊಹಮ್ಮದ್ ಅಶ್ವದ್, ಮತ್ತು ಅಬ್ದುಲ್ ಮೊಹಮ್ಮದ್ ನಿಶಾಮ್ ಎಂಬುವರನ್ನು ವಶಕ್ಕೆ ಪಡೆದಿರುತ್ತೇವೆ.
ಇವರ ವಿರುದ್ದ ಮೂಡಬಿದ್ರೆ ಅಪರಾಧ ಕ್ರಮಾಂಕ 178/2025 ಕಲಂ 111 ಬಿ.ಎನ್.ಎಸ್, 11(1)(ಡಿ) ಪ್ರಾಣಿ ಹಿಂಸಾ ಪ್ರತಿಬಂಧಕ ಕಾಯ್ದೆ ಮತ್ತು ಕಲಂ: 4, 5, 7, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆಧ್ಯಾದೇಶ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ. 1 ನೇ ಆರೋಪಿ ಮನ್ಸೂರ್ ಅದ್ಯಪಾಡಿ @ ಮೊಹಮ್ಮದ್ ಮನ್ಸೂರ್ ಮೇಲೆ ಒಟ್ಟು 29 ಪ್ರಕರಣಗಳು ವಿವಿದ ಠಾಣೆಗಳಲ್ಲಿ ದಾಖಲಾಗಿದ್ದು, ಇದು 30ನೇ ಪ್ರಕರಣವಾಗಿರುತ್ತದೆ. 2ನೇ ಆರೋಪಿ ಮೊಹಮ್ಮದ್ ಅಶ್ವದ್ ನ ಮೇಲೆ ಉಳ್ಳಾಲದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಪ್ರಕರಣ ದಾಖಲಾಗಿದ್ದು, ಇದು 2ನೇ ಪ್ರಕರಣವಾಗಿರುತ್ತದೆ. ಹಾಗೂ 3ನೇ ಆರೋಪಿ ಅಬ್ದುಲ್ ಮೊಹಮ್ಮದ್ ನಿಶಾಮ್ ನ ವಿರುದ್ದ ಇದು ಮೊದಲನೇ ಪ್ರಕರಣವಾಗಿರುತ್ತದೆ.
ಆರೋಪಿಗಳ ವಿರುದ್ದ ಸಂಘಟಿತ ಅಪರಾಧ ಪ್ರಕರಣದಂತೆ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂದನವನ್ನು ವಿದಿಸಿರುತ್ತದೆ.



























