ಆಂಧ್ರಪ್ರದೇಶದಲ್ಲಿ ನಡೆಯಲಿರುವ ದಕ್ಷಿಣ ಭಾರತ ಅಂತರ್ ವಿಶ್ವವಿದ್ಯಾಲಯ ವಾಲಿಬಾಲ್ ಪಂದ್ಯಾಟಕ್ಕೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಹುಬ್ಬಳ್ಳಿತಂಡವನ್ನು ಪ್ರತಿನಿಧಿಸಲು ವಿಟ್ಲ ಸಮೀಪದ ಅಳಿಕೆಯ ರಾಹುಲ್ ವಿ.ಆಯ್ಕೆಗೊಂಡಿದ್ದಾರೆ.
ದಾವಣಗೆರೆಯ ಆರ್.ಎಲ್.ಕಾಲೇಜಿನಲ್ಲಿ ನಡೆದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಂತರ್ ಕಾಲೇಜು ಮಟ್ಟದ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಇವರು ಅಳಿಕೆ ಗ್ರಾಮದ ಎರುಂಬು ನಿವಾಸಿ ವಿಶ್ವನಾಥ ಮತ್ತು ಪ್ರೇಮಾ ದಂಪತಿಗಳ ಪುತ್ರ. ಆಂಧ್ರಪ್ರದೇಶದಲ್ಲಿ ಡಿ.೧೦-೧೨ರವರೆಗೆ ನಡೆಯುವ ಅಂತರ್ ರಾಜ್ಯ ವಾಲಿಬಾಲ್ ಪಂದ್ಯಾಟದಲ್ಲಿ ಇವರು ಕರ್ನಾಟಕ ರಾಜ್ಯದ ಹುಬ್ಬಳ್ಳಿ ವಿಶ್ವವಿದ್ಯಾನಿಲಯ ತಂಡವನ್ನು ಪ್ರತಿನಿಧಿಸಲಿದ್ದಾರೆ. ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಯಾಗಿದ್ದಾರೆ.



























