ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿದ್ದ ರಮಾನಂದ ಅವರದು ಆತ್ಮಹತ್ಯೆ ಅಲ್ಲ, ಇದೊಂದು ವ್ಯವಸ್ಥಿತ ಕೊಲೆ ಎಂಬ ಬಗ್ಗೆ ಸಂಶಯವಿದ್ದು,ಈ ಬಗ್ಗೆ ಸೂಕ್ತವಾದ ತನಿಖೆ ನಡೆಸಿ ನ್ಯಾಯ ಒದಗಿಸಿ ಕೊಡಿ ಎಂದು ತಾಯಿ ಜಾನಕಿ ಅವರು ವಾಮಂಜರೂರು ಪೋಲೀಸ್ ಠಾಣೆಗೆ ದೂರು ನೀಡಿದ ನೀಡಿದ್ದಾರೆ.
ಬರಿಮಾರು ಗ್ರಾಮದ ದೇಲಬೆಟ್ಟು ನಿವಾಸಿ ರಮಾನಂದ (25) ಎಂಬಾತ ನ.25 ರಂದು ನಾಪತ್ತೆಯಾಗಿದ್ದ , ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು.
ಬಳಿಕ ಈತನ ಮೃತದೇಹ ವಾಮಂಜೂರು ಕೆತ್ತಿಕಲ್ಲು ಎಂಬಲ್ಲಿ ಪತ್ತೆಯಾಗಿದೆ. ರಮಾನಂದ ಅವರ ಮೃತದೇಹ ಕೆತ್ತಿಕಲ್ಲು ಎಂಬಲ್ಲಿ ಗುಡ್ಡದಲ್ಲಿ ಮರದ ಕೆಳಗೆ ಬಿದ್ದ ಸ್ಥಿತಿಯಲ್ಲಿ ಇತ್ತು, ಮೇಲ್ನೋಟಕ್ಕೆ ಈತ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಹಗ್ಗ ತುಂಡಾಗಿ ಕೆಳಗೆ ಬಿದ್ದಂತೆ ಕಾಣಿಸಿಕೊಂಡಿದ್ದು, ವಾಮಂಜರೂ ಪೋಲೀಸ್ ಠಾಣೆಯಲ್ಲಿ ಈ ಬಗ್ಗೆ ಆತ್ಮಹತ್ಯೆ ಪ್ರಕರಣ ದಾಖಲಾಗಿತ್ತು.
ಮನೆಯವರಿಗೆ ಈತನ ಸಾವಿನ ಬಗ್ಗೆ ಸಂಶಯವಿದ್ದು, ಇದೊಂದು ವ್ಯವಸ್ಥಿತ ರೀತಿಯ ಕೊಲೆಯಾಗಿರಬಹುದು ಎಂಬ ಸಂಶಯ ವ್ಯಕ್ತವಾಗಿದ್ದು, ಸೂಕ್ತವಾದ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡುವಂತೆ ಇದೀಗ ತಾಯಿ ಠಾಣೆಯ ಮೆಟ್ಟಿಲು ಏರಿದ್ದಾರೆ.



























