ಅಪ್ರಾಪ್ತ ಪ್ರಾಯದ ಬಾಲಕಿಯನ್ನು ಆರೋಪಿ ಮುಹಮ್ಮದ್ ಮುಸ್ತಫಾ (40) ಎಂಬಾತನು ಕಳೆದ ಎರಡು ತಿಂಗಳುಗಳಿಂದ ಬಸ್ ನಿಲ್ದಾಣದಿಂದ ಹಿಂಬಾಲಿಸುತ್ತಿದ್ದು, ಕಳೆದ ತಿಂಗಳ 29ನೇ ತಾರೀಕಿನಂದು ಪಿರ್ಯಾದಿರವರ ಸಹೋದರಿಯನ್ನು ಸದ್ರಿ ಆರೋಪಿಯು ಆತನ ಮನೆಗೆ ಕರೆದಿರುತ್ತಾನೆ.
ಈ ಬಗ್ಗೆ ಪಿರ್ಯಾದಿರವರು ತನ್ನ ಹೆತ್ತವರಿಗೆ ತಿಳಿಸಿದ್ದು, ದಿನಾಂಕ:02.12 2025 ರಂದು ಆರೋಪಿಯ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಅ.ಕ್ರ:114/2025, ಕಲಂ:11(1)(4),12 POCSO and 78 BNS ರಂತೆ ಪ್ರಕರಣ ದಾಖಲಾಗಿರುತ್ತದೆ.
ಪ್ರಸ್ತುತ ಅರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.




























