ಶ್ರೀವರ ಯುವಕ ಮಂಡಲ (ರಿ)ಪೂರ್ಲಪ್ಪಾಡಿ ಹಾಗೂ ಗ್ರಾಮ ಪಂಚಾಯತ್ ವಿಟ್ಲಪಡ್ನೂರು ಇದರ ಸಹಯೋಗದೊಂದಿಗೆ ಮೂರು ಗ್ರಾಮಗಳಿಗೆ ಒಳಪಟ್ಟ ಆಯ್ದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ಪೂರ್ಲಪ್ಪಾಡಿ ಶ್ರೀವರ ವೇದಿಕೆ ಮುಂಭಾಗದಲ್ಲಿ ಜರಗಿತು.
ರಸಪ್ರಶ್ನೆ ಕಾರ್ಯಕ್ರಮವನ್ನು ಯುವಕ ಮಂಡಲದ ಗೌರವ ಸಲಹೆಗಾರರು ಹಿರಿಯ ವಕೀಲರು, ನೋಟರಿ ಶ್ರೀ ರಾಮಣ್ಣ ಗೌಡ ದೇವರಮನೆ ಉದ್ಘಾಟಿಸಿದರು.
ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಆಯ್ತ ಸರಕಾರಿ ಶಾಲೆಗಳಾದ ವಿಟ್ಲ ಪಡ್ನೂರು ಗ್ರಾಮದ ದ. ಜಿ. ಪಂ. ಹಿ. ಪ್ರಾ. ಶಾಲೆ ಕೊಡಂಗಾಯಿ, ಕಡಂಬು, ಕೊಡಪದವು, ಕೊಲ್ನಾಡು ಗ್ರಾಮದ ಮಂಕು ಕೂಡ ಶಾಲೆ ಹಾಗೂ ವಿಟ್ಲಕಸಭಾ ಗ್ರಾಮದ ಅನಿಲಕಟ್ಟೆ, ಕಾನತ್ತಡ್ಕ, ಚಂದಳಿಕೆ ಹಾಗೂ ಒಕ್ಕೆತ್ತೂರು ಶಾಲೆಗಳು ಭಾಗವಹಿಸಿದ್ದವು, ಈ ರಸಪ್ರಶ್ನೆ ಸ್ಪರ್ಧೆಯು 5 ಹಂತಗಳಲ್ಲಿ ನಡೆಸಲಾಗಿತ್ತು ಇದರಲ್ಲಿ ಪ್ರಥಮ ಸ್ಥಾನವನ್ನು ದ.ಕ. ಜಿ. ಪಂ. ಹಿ. ಪ್ರಾ. ಶಾಲೆ ಒಕ್ಕೆತ್ತೂರು ಪಡೆಯಿತು ಅಲ್ಲದೆ ದ್ವಿತೀಯ ಸ್ಥಾನವನ್ನು ಹಿ. ಪ್ರಾ. ಶಾಲೆ ಕಾನತ್ತಡ್ಕ ಮತ್ತು ತೃತೀಯ ಸ್ಥಾನವನ್ನು ದ. ಕ. ಜಿ. ಪಂ. ಉ. ಶಾಲೆ ಕೋಡಪದವು ಪಡೆಯಿತು.
ಈ ರಸಪ್ರಶ್ನೆ ಕಾರ್ಯಕ್ರಮವನ್ನು ಹೆಚ್ಚು ಮುತುವರ್ಜಿಯಿಂದ ವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಯುವಕ ಮಂಡಲದ ಗೌರವಾಧ್ಯಕ್ಷರಾದ ಶ್ರೀ ಈಶ್ವರ ಭಟ್ ಬಧನಾಜೆ ರವರು ನಿರ್ವಹಿಸಿದರು.
ಕಾರ್ಯಕ್ರಮದ ನಂತರ ನಡೆದ ಬಹುಮಾನ ವಿತರಣಾ ಕಾರ್ಯಕ್ರಮವು ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಕಿರಣ್ ಚಂದ್ರ ಆಳ್ವ ರವರ ಉಪಸ್ಥಿತಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಜಯಂತ ಪಿ, ಶ್ರೀ ನವೀನ್ ತಂತ್ರಿ ಕುಂಟುಕುಡೆಲು, ಹವ್ಯಾಸಿ ಯಕ್ಷಗಾನ ಅರ್ಥದಾರಿಗಳಾದ ಶ್ರೀ ಜಗದೀಶ್ ಪನಡ್ಕ ಪುಣಚ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಶೈಲ ಡೊಣುರ, ಪಂಚಾಯತ್ ಕಾರ್ಯದರ್ಶಿ ಅಬ್ದುಲ್ ಕರಿಂ, ಶಾಲಾ ಶಿಕ್ಷಕರಾದ ಬಿ ವಿಶ್ವನಾಥ ಗೌಡ ಕುಳಾಲು, ಶ್ವೇತ ಕುಮಾರಿ ಜಿ, ವಾಣಿಶ್ರೀ ಸಿ, ಯಶಸ್ವಿನಿ, ಗೀತಾ ಕೆ, ಪವಿತ್ರ, ರಕ್ಷಿತಾ, ಐತ್ತಪ್ಪ ನಾಯ್ಕ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ವಾಣಿ ಉಪಸ್ಥಿತರಿದ್ದರು. ಈ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮದಲ್ಲಿ ಶ್ರೀಮತಿ ಶ್ವೇತಾ ಚೇತನ್, ಶ್ರೀ ರಾಕೇಶ್ ಕಾಮಟ, ಶ್ರೀಮತಿ ಅಶ್ವಿನಿ ಜಯಂತ್ ಸಹಕರಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳನ್ನು ಪ್ರೋತ್ಸಾಹಿಸುವ ಹಾಗೂ ಮಕ್ಕಳಿಗೆ ಔಷಧಿಯ ಸಸ್ಯ ಮತ್ತು ಹಣ್ಣುಗಳನ್ನು ಗುರುತಿಸುವ ಸ್ಪರ್ಧೆಯನ್ನು ಏರ್ಪಡಿಸಿ ಜೋಡಿಸಲಾಗಿತ್ತು, ಇದರ ಬಹುಮಾನವನ್ನು ಶ್ರೀ ಜಗದೀಶ್ ಪನಡ್ಕರವರ ವೈಯಕ್ತಿಕ ನೆಲೆಯಲ್ಲಿ ನೀಡಿದರು. ಅದಲ್ಲದೆ ಯುವಕ ಮಂಡಲದ ಸದಸ್ಯರಾದ ಪ್ರಜೇಶ್ ಕೆ ರವರ ಮುತುವರ್ಜಿಯಲ್ಲಿ ಭಾರತ್ ಪ್ರೆಶ್ ಚಿಕನ್, ಯೂನಿಟ್ ಆಫ್ ಭಾರತ್ ಆಗ್ರೋವೆಟ್ ಇಂಡಸ್ಟ್ರೀಸ್ ರವರ ವತಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ನೀಡಲಾಯಿತು ಯುವಕಮಂಡಲದ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ಸಂಪೂರ್ಣವಾಗಿ ಸಹಕರಿಸಿದರು.




























