ಯುವವಾಹಿನಿ (ರಿ.) ವಿಟ್ಲ ಘಟಕದ 2025/26 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ವಿಟ್ಲ ಅರಮನೆಯ ಅರಸರಾದ ಕೃಷ್ಣಯ್ಯ ಕೆ ವಿಟ್ಲ, ಜಯರಾಮ ಬಲ್ಲಾಳ್, ಯುವವಾಹಿನಿ (ರಿ.) ವಿಟ್ಲ ಘಟಕದ ಅಧ್ಯಕ್ಷರಾದ ಹರೀಶ್ ಪೂಜಾರಿ ಮರುವಾಳ, ಬಿಲ್ಲವ ಸಂಘ (ರಿ.) ವಿಟ್ಲ ಇದರ ಅಧ್ಯಕ್ಷರಾದ ಜಯಪ್ರಕಾಶ್ ವಿಟ್ಲ, ಗೌರವಾಧ್ಯಕ್ಷರಾದ ಸಂಜೀವ ಪೂಜಾರಿ ಎಮ್ ಎಸ್, ಯುವವಾಹಿನಿ (ರಿ.) ವಿಟ್ಲ ಘಟಕದ ನಿಯೋಜಿತ ಅಧ್ಯಕ್ಷರಾದ ಕೆ. ಟಿ. ಆನಂದ ಪೂಜಾರಿ, ಕಾರ್ಯದರ್ಶಿ ವಿನೋದ್ ಮಾಡತಡ್ಕ, ಕೋಶಾಧಿಕಾರಿ ಶ್ರೀಮತಿ ಶೋಭಾ, ಜೊತೆಕಾರ್ಯದರ್ಶಿ ಶ್ರೀಮತಿ ನಿರ್ಮಲ, ಉಪಾಧ್ಯಕ್ಷರಾದ ಕೇಶವ ಪಂಜುರ್ಲಿಮೂಲೆ, ನಿಯೋಜಿತ ಕಾರ್ಯದರ್ಶಿ ಶ್ರೀಮತಿ ಧನಲಕ್ಷ್ಮೀ ರಾಜೇಶ್, ಕೋಶಾಧಿಕಾರಿ ಕೀರ್ತನ್ ಸಣ್ಣಗುತ್ತು, ಸಂಘಟನಾ ಕಾರ್ಯದರ್ಶಿ ವಿಶ್ವನಾಥ ಪೂಜಾರಿ ಅಳಿಕೆ ಮತ್ತು ಸದಸ್ಯರು ಉಪಸ್ಥಿತರಿದ್ದರು
ಕಾರ್ಯಕ್ರಮವು ದಿನಾಂಕ 14/12/2025 ನೇ ಭಾನುವಾರ ಬೆಳಗ್ಗೆ 10:30 ರಿಂದ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ ವಿಟ್ಲದಲ್ಲಿ ನಡೆಯಲಿದ್ದು ಈ ಸಂದರ್ಭದಲ್ಲಿ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಯುವವಾಹಿನಿ (ರಿ. ) ವಿಟ್ಲ ಘಟಕದ ಅಧ್ಯಕ್ಷ ಹರೀಶ್ ಪೂಜಾರಿ ಮರುವಾಳ ತಿಳಿಸಿದರು




























