2024 ನೇ ಸಾಲಿನ ಫೆಬ್ರವರಿ ತಿಂಗಳಿನಲ್ಲಿ ಭಗವದ್ಗೀತೆ ಮತ್ತು ಮಹಿಳೆಯರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹರಿಬಿಟ್ಟಿದ್ದ ಸಂಬಂಧ ಕಂಕನಾಡಿ ನಗರ ಠಾಣೆಯಲ್ಲಿ ಅ.ಕ್ರ ನಂಬ್ರ-29/2024 ಕಲಂ 153(ಎ), 504, 507, 509 ಐಪಿಸಿ & ಕಲಂ 66(ಡಿ) ಐ.ಟಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ಆರೋಪಿಯು ಆ ಸಮಯದಲ್ಲಿ ಸೌದಿ ಅರೇಬಿಯಾದಲ್ಲಿದ್ದಿದ್ದು, ಸಿಕ್ಕಿರುವುದಿಲ್ಲ.
ಆರೋಪಿ ಫೆಲಿಕ್ಸ್ ಎಡ್ವರ್ಡ್ ಮಥಾಯಿಸ್ (ಪ್ರಾಯ 56 ವರ್ಷ) ಮೂಲತ ಮುಂಬಯಿಯ ಚಾರ್ಕೋಪ್ ಎಂಬಲ್ಲಿಯವನಾಗಿದ್ದು, ಈತನು ಹೊರದೇಶದ ಸೌದಿ ಅರೇಬಿಯದಲ್ಲಿ ಉದ್ಯೋಗದಲ್ಲಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ, ಆರೋಪಿತನ ವಿರುದ್ದ ಲುಕ್ ಔಟ್ ಸರ್ಕುಲರ್ ( LOC ) ಹೊರಡಿಸಲಾಗಿತ್ತು.
ಆರೋಪಿಯು ಮುಂಬಯಿಯ ಸಹರಾ ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಬಂದು ಇಳಿದವನನ್ನು ಇಮಿಗ್ರೇಶನ್ ಅಧಿಕಾರಿಗಳು ತಡೆಹಿಡಿದು ಮಾಹಿತಿ ನೀಡಿದ್ದು, ಅದರಂತೆ ಆತನನ್ನು ದಿನಾಂಕ 05-12-2025 ರಂದು ಮುಂಬಯಿಯ ಸಹರಾ ಏರ್ ಪೋರ್ಟ್ ನಲ್ಲಿ ದಸ್ತಗಿರಿ ಮಾಡಿ ತನಿಖೆಗೆ ಒಳಪಡಿಸಿ, ಮಂಗಳೂರಿಗೆ ಕರೆತಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ, ಈ ಆರೋಪಿಯ ಪಾಸ್ ಪೋರ್ಟ್ ನ್ನು ಮುಟ್ಟುಗೋಲು ಹಾಕಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.
ಪ್ರಕರಣದಲ್ಲಿ ಇನ್ನೋರ್ವ ಆರೋಪಿತ ಎವಿಜಿನ್ ಜಾನ್ ಡಿಸೋಜಾ (ಪ್ರಾಯ 57 ವರ್ಷ) ಎಂಬವನನ್ನು ದಿನಾಂಕ 11-08-2024 ರಂದು ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು, ಪ್ರಕರಣದಲ್ಲಿ ತನಿಖೆ ಮುಂದುವರೆದಿದೆ.




























