ಮಂಗಳೂರು: ದ.ಕ. ಜಿಲ್ಲೆಯಲ್ಲಿ ಜೂನ್ 23ರಿಂದ ಹೊಸ ಮಾರ್ಗಸೂಚಿ ಜಾರಿಗೆ ಬರಲಿದ್ದು, ಬೆಳಿಗ್ಗೆ 7ರಿಂದ ಮಧ್ಯಾಹ್ನ 2 ಗಂಟೆಯ ತನಕ ಎಲ್ಲಾ ಅಂಗಡಿಗಳು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಹೊಸ ಮಾರ್ಗಸೂಚಿಯಲ್ಲಿ ಹೆಚ್ಚಿನ ವಿನಾಯಿತಿ ನೀಡಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾಹಿತಿ ನೀಡಿದ್ದಾರೆ.
ಹೊಸ ಮಾರ್ಗಸೂಚಿಯಲ್ಲಿ ಏನಿದೆ?
- ಬೆ. 7ರಿಂದ ಮಧ್ಯಾಹ್ನ 2ರ ತನಕ ಎಲ್ಲಾ ಅಂಗಡಿಗಳು ಓಪನ್
- ದ.ಕ. ಜಿಲ್ಲೆಯ ಮಾಲ್ ಗಳು ಓಪನ್ ಆಗಲ್ಲ
- ಹವಾನಿಯಂತ್ರಿತ ಕಾಂಪ್ಲೆಕ್ಸ್ ಗಳಿಗೂ ಅವಕಾಶವಿಲ್ಲ
- ಹೋಟೇಲ್ ಗಳಲ್ಲಿ 50% ಜನರಿಗೆ ಅವಕಾಶ ನೀಡಲಾಗಿದೆ
- ಮಧ್ಯಾಹ್ನ ನಂತರ ಹೋಟೇಲ್ ಗಳಲ್ಲಿ ಪಾರ್ಸೆಲ್ ಮಾತ್ರ ಲಭ್ಯ
- ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಿಗ್ಗೆ 7ರ ತನಕ ವೀಕೇಂಡ್ ಕರ್ಫ್ಯೂ
- ವೀಕೆಂಡ್ ಕರ್ಫ್ಯೂ ಸಂದರ್ಭ ಹಾಲಿನ ಬೂತ್ ಗಳಿಗೆ ಮಾತ್ರ ಅವಕಾಶ
- ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಬೇರೆ ಅಂಗಡಿಗಳು ಓಪನ್ ಇರಲ್ಲ
- 24 ಗಂಟೆ ಕಾರ್ಯಾಚರಿಸುವ ಕಂಪೆನಿಗಳಿಗೆ ಅವಕಾಶ
- ಕಂಪೆನಿಗಳ ಐಡಿ ತೋರಿಸಿ ಸಂಚಾರ ನಡೆಸಬಹುದು
- ವಾರಾಂತ್ಯ ಕರ್ಫ್ಯೂ ಸಂದರ್ಭ ಬಸ್ ಸಂಚಾರಕ್ಕೆ ಅವಕಾಶವಿಲ್ಲ
- ಪ್ರತಿ ದಿನ ಸಂಜೆ 7ರಿಂದ ಬೆಳಿಗ್ಗೆ 7ರ ತನಕ ನೈಟ್ ಕರ್ಫ್ಯೂ ಜಾರಿ
- ಜಿಲ್ಲೆಯಲ್ಲಿ ಬಸ್ ಸಂಚಾರಕ್ಕೆ ಅವಕಾಶ, ಶೇ. 50ರಷ್ಟು ಪ್ರಯಾಣಿಕರೊಂದಿಗೆ ಸಂಚಾರಕ್ಕೆ ಅವಕಾಶ
- ಬೆಳಿಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯ ತನಕ ಬಸ್ ಸಂಚಾರ
- ಬಸ್ ಗಳಲ್ಲಿ ನಿಂತು ಪ್ರಯಾಣಕ್ಕೆ ಅವಕಾಶವಿಲ್ಲ
- ಧಾರ್ಮಿಕ ಕೇಂದ್ರಗಳಿಗೆ ಸಾರ್ವಜನಿಕರಿಗೆ ಅವಕಾಶವಿಲ್ಲ
- ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧ
- ಬೆಳಿಗ್ಗೆ 5-10 ಗಂಟೆಯ ತನಕ ಜಾಗಿಂಗ್, ವಾಕಿಂಗ್ ಗೆ ಪಾರ್ಕ್ ಗಳು ಓಪನ್
- ಪೂರ್ವ ನಿಗದಿತ ವಿವಾಹಗಳು ಶೇ. 50 ಜನಸಂಖ್ಯೆಯಲ್ಲಿ ನಡೆಸಬಹುದು