ಪುತ್ತೂರು: ಗುತ್ತಿಗಾರು ಗ್ರಾಮದ ಕಮಿಲ ಮಾಧವ-ವೀಣಾ ದಂಪತಿಯ ಒಂದೂವರೆ ತಿಂಗಳ ಗಂಡು ಮಗು ನಿಶ್ಚಿತ್ ಅಸ್ವಸ್ಥಗೊಂಡು ಡಿ.9ರಂದು ಮೃತಪಟ್ಟಿರುವ ಘಟನೆ ವರದಿಯಾಗಿದೆ.
ವೀಣಾ ಅವರು ಮಗುವಿನೊಂದಿಗೆ ಸವಣೂರಿನ ಪುಣ್ಣಪ್ಪಾಡಿ ಗ್ರಾಮದ ಓಡಂತರ್ಯದ ತವರಿನಲ್ಲಿದ್ದರು.
ಡಿ. 5ರಂದು ಮಗುವಿಗೆ ವಾಂತಿ ಆರಂಭವಾಗಿದ್ದು ಕುಂಬ್ರದ ಕ್ಲಿನಿಕ್‌ನಿಂದ ಔಷಧ ತಂದಿದ್ದರು. ರಾತ್ರಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಾಗ ಪುತ್ತೂರಿನ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದರು.
ಅಲ್ಲಿ ಪರೀಕ್ಷಿಸಿದ ವೈದ್ಯರು ಮಗು ಕೊನೆಯುಸಿರೆಳೆದಿರುವುದಾಗಿ ತಿಳಿಸಿದ್ದಾರೆ. ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


























