ಪುತ್ತೂರು : ಪಾಲಿಂಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಭಕ್ತಿಭಾವ ಹಾಗೂ ಸಂಪ್ರದಾಯದೊಂದಿಗೆ ವರ್ಷಾವಧಿ ಜಾತ್ರೋತ್ಸವ ಹಾಗೂ ಧರ್ಮ ದೈವಗಳ ನೇಮೋತ್ಸವ ಕಾರ್ಯಕ್ರಮವು ಜನವರಿ 03 ಮತ್ತು 04ರಂದು ನಡೆಯಲಿದೆ.
ಡಿ.27 ರಂದು ಗೊನೆ ಮುಹೂರ್ತ ನಡೆಯಲಿದ್ದು ಜ.02 ರಂದು ಚಾಮುಂಡೇಶ್ವರಿ ದೇವಸ್ಥಾನದ ಬಳಿಯಿಂದ ಹೊರೆ ಕಾಣಿಕೆ ಮೆರವಣಿಗೆ ವಿಜೃಂಭಣೆಯಿಂದ ಹೊರಡಲಿದ್ದು ಶಾಸಕ ಅಶೋಕ್ ಕುಮಾರ್ ರೈ, ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಉಪಸ್ಥಿತರಿರಲಿದ್ದಾರೆ. ಬಳಿಕ
ಶ್ರೀ ದೇವತಾ ಪ್ರಾರ್ಥನೆ, ಉಗ್ರಾಣ ಪೂಜೆ ನಡೆಯಲಿದೆ.
ಜ.03 ರಂದು ಬೆಳಗ್ಗೆ ಗಣಹೋಮ ಆಶ್ಲೇಷ ಬಲಿ, ನಾಗತಂಬಿಲ, ದೇವರಿಗೆ ಪವಮಾಭಿಷೇಕ, ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ದೇವರ ಬಲಿ ಹೊರಟು ಉತ್ಸವ ದರ್ಶನ ಬಲಿ ಬಟ್ಟಲು ಕಾಣಿಕೆ ಬಳಿಕ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ.
ಜ.04 ರಂದು ದೈವಗಳ ಭಂಡಾರ ತೆಗೆದು ಧರ್ಮ ದೈವಗಳ ನೇಮೋತ್ಸವ ನಡೆಯಲಿದೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಎಂದು ಅಧ್ಯಕ್ಷರಾದ ವಿಶ್ವಜೀತ್ ಪೂಜಾರಿ ಅಮ್ಮುಂಜ ಮನವಿ ಮಾಡಿದ್ದಾರೆ..


























