ದಿನಾಂಕ: 12-12-2025 ರಂದು ಯೆಯ್ಯಾಡಿಯ ಶ್ರೀ ಹರಿ ಕಾಂಪ್ಲೆಕ್ಸ್ ನ ಪಾರ್ಕಿಂಗ್ ಬಳಿ ನಿಲ್ಲಿಸಿದ್ದ ಯಮಹಾ FZ ಕಂಪನಿಯ KA-19-ER-7755 ನೇ ಮೋಟಾರ್ ಸೈಕಲ್ ನ್ನು ಕಳವು ಆದ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಈ ಬಗ್ಗೆ ಕದ್ರಿ ಅಫರಾಧ ವಿಭಾಗದ ಸಿಬ್ಬಂದಿಗಳಿಗೆ ದೊರೆತ ಖಚಿತ ಮಾಹಿತಿಯಂತೆ ದಿನಾಂಕ : 16-12-2025 ರಂದು ಪ್ರಕರಣದ ಪ್ರಮುಖ ಆರೋಪಿ 1] ಪೈಸಲ್ @ ತೋಟ ಪೈಸಲ್ 2] ನಿತೀನ್ ಕುಮಾರ್, ಮೈಸೂರು ರವರನ್ನು ವಶಕ್ಕೆ ಪಡೆದು ಕೂಲಂಕುಷವಾಗಿ ವಿಚಾರಿಸಿದಾಗ ಈ ಆರೋಪಿಗಳು ದಿನಾಂಕ: 13-12-2025 ರಂದು ಭಟ್ಕಳ ಗ್ರಾಮಿಣ ಪೊಲೀಸ್ ಠಾಣಾ ಸರಹದ್ದಿನ ಗರ್ಡಿ ಹಿತ್ಲು ಬೆಳಕೆ ಭಟ್ಕಳ ತಾಲೂಕಿನಲ್ಲಿ ವಯೋವೃದ್ದ ಮಹಿಳೆಯಾದ ಶ್ರೀಮತಿ ಹೊನ್ನಮ್ಮ ಮಹಾದೇವ ನಾಯ್ಕ್ [ 70 ವರ್ಷ] ರವರ ಕುತ್ತಿಗೆಯಿಂದ ಚಿನ್ನದ ಚೈನ್ ನ್ನು ಕಸಿದುಕೊಂಡು ಪರಾರಿಯಾದ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಬಾಯಿ ಬಿಟ್ಟಿದ್ದು, ಆರೋಪಿಗಳಿಂದ ಚಿನ್ನದ ಸರ-1, ಇದರ ಅಂದಾಜು ಮೌಲ್ಯ ರೂ 1,20,000/- ಮತ್ತು ಕೃತ್ಯಕ್ಕೆ ಉಪಯೋಗಿಸಿದ ಒಂದು ಬೈಕ್-1 ಅಂದಾಜು ಮೌಲ್ಯ ರೂ 45,000/- ಸೊತ್ತನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಆರೋಪಿಗಳ ಹೆಸರು ಮತ್ತು ವಿಳಾಸ
1] ಪೈಸಲ್ @ ತೋಟ ಪೈಸಲ್ ತಂದೆ: ಇಬ್ರಾಹಿಂ ಬೈತುಲ್ ಕೌಸರ್, ವಾಸ: ನ್ಯೂ ತೋಟ ಹೌಸ್, ಉಳ್ಳಾಲ
2] ನಿತೀನ್ ಕುಮಾರ್ ತಂದೆ: ವೈ.ಎನ್. ನಾಗೇಶ್, ವಾಸ: ಪಡುವಾರಳ್ಳಿ 2 ನೇ ಮುಖ್ಯ ರಸ್ತೆ, 2 ನೇ ಕ್ರಾಸ್, ವಿನಾಯಕ ನಗರ. ಮೈಸೂರು
ಪೈಸಲ್ @ ತೋಟ ಪೈಸಲ್ ಈತನ ವಿರುದ್ದ ಕರ್ನಾಟಕದ ಉಡುಪಿ ಕಾರ್ಕಳ, ಮಣಿಪಾಲ .ಮಂಗಳೂರು. ಬೆಳ್ತಂಗಡಿ, ವಿಟ್ಲ, ಕಂಕನಾಡಿ ನಗರ ಪೊಲೀಸ್ ಠಾಣೆ, ಪುತ್ತೂರು, ಶಿರ್ವ ಸುರತ್ಕಲ್, ಕಡಬ, ಕೊಣಾಜೆ, ಮಡಿಕೇರಿಯ ಕುಶಾಲ ನಗರ, ಹಾಗೂ ಕೇರಳ ರಾಜ್ಯಗಳಲ್ಲಿ ರಾಬರಿ, ದರೋಡೆ, ಕಳ್ಳತನದ ಮತ್ತು ಕೊಲೆ ಪ್ರಕರಣ ಸೇರಿದಂತೆ ಸುಮಾರು 42 ಪ್ರಕರಣಗಳು ದಾಖಲಾಗಿರುತ್ತದೆ. ಈತನ ವಿರುದ್ದ ವಿವಿಧ ನ್ಯಾಯಾಲಯಗಳಲ್ಲಿ 10 ಕ್ಕಿಂತಲೂ ಹೆಚ್ಚು ಜಾಮೀನು ರಹಿತ ವಾರೆಂಟ್ ಇದ್ದು, ನ್ಯಾಯಾಲಯಕ್ಕೆ ಹಾಜರಾಗದೇ ತಲೆ ತಪ್ಪಿಸಿಕೊಂಡಿರುತ್ತಾನೆ.
ಮಂಗಳೂರು ಪೂರ್ವ ಪೊಲೀಸ್ ಠಾಣೆಯ ನಿರೀಕ್ಷಕರಾದ ಅನಂತ ಪದ್ಮನಾಭ, ಪಿಎಸ್ಐ ಮನೋಹರ್ ಪ್ರಸಾದ್, ಎ.ಎಸ್.ಐ.ಗಳಾದ ಚಂದ್ರಶೇಖರ್, ಸುಧಾಕರ್ ರಾವ್, ರಾಜಶೇಖರ್, ಹೆಚ್.ಸಿ.ಗಳಾದ ಲೋಕೆಶ್, ಸಂತೋಷ್ ಡಿ.ಕೆ. ಸುರೇಶ್, ದಿಲೀಪ್, ಮೋಹನ್, ಮಲ್ಲಪ್ಪ ಬಿ. ಮತ್ತು ಪಿ.ಸಿ.ಗಳಾದ ಸುನೀಲ್, ಮಣಿಕಂಠ, ಮೌಲಾ ಅಹಮ್ಮದ್ ಮತ್ತು ಮಂಜುನಾಥ ವಡ್ಡರ ಹಾಗೂ ಕದ್ರಿ ಠಾಣೆಯ ಸಿಬ್ಬಂದಿ ವರ್ಗ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ.

























