ಅಂತರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಲಿಮಿಟೆಡ್ ಮಂಗಳೂರು ಇದರ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಎಸ್.ಆರ್ ಸತೀಶ್ಚಂದ್ರ ಇವರಿಗೆ ವಿಟ್ಲ ಗ್ರಾಮೀಣ ಸಹಕಾರಿ ಸಂಘದ ವತಿಯಿಂದ ಕ್ಯಾಂಸ್ಕೋ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಹೆಚ್ ಜಗನ್ನಾಥ್ ಸಾಲಿಯಾನ್ ಇವರು ಶಾಲು ಹೊದಿಸಿ ಸ್ಮರಣಿಕೆಯನ್ನು ನೀಡಿ ಅಭಿನಂದನೆ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಶ್ರೀಮತಿ ಜಯಂತಿ ಹೆಚ್ ರಾವ್, ಶ್ರೀಮತಿ ಶುಭಲಕ್ಷ್ಮಿ, ಶ್ರೀ ದಯಾನಂದ ಆಳ್ವ ಕೆ. ಶ್ರೀ ದಿವಾಕರ ವಿ. ಶ್ರೀ ಗೋವರ್ಧನ ಕುಮಾರ್ ಐ, ಶ್ರೀ ಭಾಸ್ಕರ ಶೆಟ್ಟಿ, ಶ್ರೀ ರಾಮದಾಸ ಶೆಣೈ ವಿ. ಶ್ರೀ ವಿಶ್ವನಾಥ ಎಂ, ಶ್ರೀ ಸತೀಶ್ ಪಿ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಕೃಷ್ಣ ಮುರಳಿ ಶ್ಯಾಮ್ ಕೆ ಉಪಸ್ಥಿತರಿದ್ದರು.

























