ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕಲ್ಲಮಜಲು-ಸೆರ್ಕಳ ರಸ್ತೆಯ ವಾಸವ್ಯವಿಲ್ಲದ ದಿ.ಬಟ್ಯ ನಾಯ್ಕರ ಮನೆಯ ಬಾವಿಯೊಳಗೆ ಪುರುಷನ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿತ್ತು.
ರಸ್ತೆಯಲ್ಲಿ ಹೋಗುತ್ತಿದ್ದ ಸ್ಥಳೀಯರಿಗೆ ದುರ್ವಾಸನೆ ಬಂದ ಕಾರಣ ಹುಡುಕಾಡಿದಾಗ ವಾಸ್ತವ್ಯವಿಲ್ಲದ ಪಾಳು ಬಿದ್ದ ಮನೆಯಂಗಳದ ಬಾವಿಯಲ್ಲಿ ಮೃತದೇಹ ಕಂಡುಬಂದಿತ್ತು. ತಕ್ಷಣವೇ ಸ್ಥಳೀಯರು ವಿಟ್ಲ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸ್ ನಿರೀಕ್ಷಕರು ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಫ್ರೆಂಡ್ಸ್ ವಿಟ್ಲ ತಂಡದ ಕಾರ್ಯಾಚರಣೆ.
ಹಲವು ವರ್ಷಗಳಿಂದ ಜಿಲ್ಲೆಯಾದ್ಯಂತ ಸಮಾಜಸೇವೆಯನ್ನೇ ಉಸಿರಾಗಿಸಿದ, ನೊಂದವರ ಪಾಲಿಗೆ ಆಪತ್ಕಾಲದಲ್ಲಿ ಆಪತ್ಭಾಂದವನಾದ ಮುರಳೀಧರ ವಿಟ್ಲ ನೇತೃತ್ವದ “ಫ್ರೆಂಡ್ಸ್ ವಿಟ್ಲ” ತಂಡದವರು ಸ್ಥಳಕ್ಕಾಗಮಿಸಿ 57ಅಡಿ ಆಳದ ಆಮ್ಲಜನಕವಿಲ್ಲದ ಬಾವಿಯೊಳಗೆ ಬಿದ್ದಿದ್ದ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.
ಫ್ರೆಂಡ್ಸ್ ವಿಟ್ಲ ತಂಡದ ಕಾರ್ಯಕ್ಕೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದು ಸ್ಥಳೀಯರು ಸಹಕಾರ ನೀಡಿದ್ದಾರೆ.
ಪೂವಪ್ಪ ಪೂಜಾರಿ ಆತ್ಮಹತ್ಯೆ ಬಗ್ಗೆ ಪತ್ನಿ ಸುಶೀಲಾ ಎಂಬವರು ನೀಡಿದ ದೂರಿನಂತೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

























