ಪುತ್ತೂರು: ಹೆಲ್ಮೆಟ್ ಕದಿಯುತ್ತಿದ್ದ ವೇಳೆ ಸಿಕ್ಕಿಬಿದ್ದು ಇಬ್ಬರು ಯುವಕರು ಪರಾರಿಯಾದ ಘಟನೆ ಪುತ್ತೂರಿನ ರಿಲಯನ್ಸ್ ಡಿಜಿಟಲ್ ನ ಪಾರ್ಕಿಂಗ್ ನಲ್ಲಿ ನಡೆದಿದೆ.
ಮಳಿಗೆಯ ನೆಲ ಅಂತಸ್ತಿನಲ್ಲಿ ಪಾರ್ಕ್ ಮಾಡಲಾಗಿದ್ದ ದ್ವಿಚಕ್ರ ವಾಹನದಿಂದ ಹೆಲ್ಮೆಟ್ ಕದ್ದೊಯ್ಯುವ ಸಂದರ್ಭದಲ್ಲಿ ಅನುಮಾನಗೊಂಡ ಸಿಬ್ಬಂದಿಗಳು ಆತನನ್ನು ಹಿಡಿಯಲು ಯತ್ನಿಸಿದಾಗ, ಆತ ಬೈಕ್ ಅನ್ನು ಬಿಟ್ಟು ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಪುತ್ತೂರು ಪೊಲೀಸರು ಬೇಟಿ ನೀಡಿದ್ದಾರೆ. ಅದೇ ರಸ್ತೆಯಲ್ಲಿ ತೆರಳುತ್ತಿದ್ದ ಅರುಣ್ ಕುಮಾರ್ ಪುತ್ತಿಲ ಕೂಡ ಸ್ಥಳಕ್ಕೆ ಬೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಸಿಸಿ ಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

























