ಕುಂಡಡ್ಕ: ಬಿಲ್ಲವ ಸಂಘ (ರಿ.), ಕುಂಡಡ್ಕ ಇದರ ಆಶ್ರಯದಲ್ಲಿ ದಿನಾಂಕ 28-12-2025ನೇ ಆದಿತ್ಯವಾರ, ಪೂರ್ವಾಹ್ನ 9.00 ಗಂಟೆಯಿಂದ ಕುಂಡಡ್ಕದ ಗುರುನಗರದಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರುದೇವ ಸಮುದಾಯ ಭವನದಲ್ಲಿ ಧಾರ್ಮಿಕ ಕಾರ್ಯಕ್ರಮವು ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಹರೀಶ್ ಶಾಂತಿ ಪುತ್ತೂರು ಇವರ ಪೌರೋಹಿತ್ಯದಲ್ಲಿ ಶ್ರೀ ಗಣಪತಿ ಹವನ, ಜೊತೆಗೆ ಬ್ರಹ್ಮಶ್ರೀ ನಾರಾಯಣ ಗುರು ಪೂಜೆ ಹಾಗೂ ನೂತನ ಶೌಚಾಲಯಗಳ ಉದ್ಘಾಟನೆ ನೆರವೇರಲಿದೆ.
ಈ ಪುಣ್ಯ ಕಾರ್ಯಕ್ರಮದಲ್ಲಿ ಭಗವದ್ಭಕ್ತರು ಹಾಗೂ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತನು–ಮನ–ಧನಗಳಿಂದ ಸಹಕರಿಸಿ, ಪ್ರಸಾದವನ್ನು ಸ್ವೀಕರಿಸುವ ಮೂಲಕ ಶ್ರೀ ನಾರಾಯಣ ಗುರುಸ್ವಾಮಿಗಳ ಸಂಪೂರ್ಣ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಸಂಘದ ಪದಾಧಿಕಾರಿಗಳು ವಿನಂತಿಸಿದ್ದಾರೆ.


























