ಮೈರ–ಕೇಪು ಗ್ರಾಮದಲ್ಲಿ ಡಿಸೆಂಬರ್ 28ರಂದು ಸವಿ ನೆನಪಿನ ಪ್ರಯಾಣಿಕರ ತಂಗುದಾಣವನ್ನು ಉದ್ಘಾಟಿಸಲಾಯಿತು. ಈ ತಂಗುದಾಣವನ್ನು ಶ್ರೀಮತಿ ಬೇಡೆಮಾರ್ ರಾಧಾ ರಾಮಣ್ಣ ಶೆಟ್ಟಿ ಅವರ ಸ್ಮರಣಾರ್ಥ ನಿರ್ಮಿಸಲಾಗಿದೆ.
ಶ್ರೀಮತಿ ರಾಧಾ ರಾಮಣ್ಣ ಶೆಟ್ಟಿ ಅವರು ಕೇಷು ಗ್ರಾಮದ ಮಾಜಿ ಗ್ರಾಮ ಪಂಚಾಯತ್ ಸದಸ್ಯೆಯಾಗಿ ಹಾಗೂ ಮಂಗಳೂರು ಎಪಿಎಂಸಿ ಮಾಜಿ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದರು. ಅವರ ಸಮಾಜಮುಖಿ ಸೇವೆ ಹಾಗೂ ಸಾರ್ವಜನಿಕ ಬದುಕನ್ನು ಸ್ಮರಿಸಿ ಈ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಲಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ಎಸ್ ಎಸ್ ಶೆಟ್ಟಿ, ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಮೈಸೂರು(Rtd), ಶಶಿಕಲಾ ಎಸ್ ಶೆಟ್ಟಿ, ಮ್ಯಾನೇಜರ್ ವಿಜಯ ಬ್ಯಾಂಕ್ (Rtd), ಕೆ ಪಿ ಶೆಟ್ಟಿ ಬೆಡೆಮಾರ್, ಸೀನಿಯರ್ ಮ್ಯಾನೇಜರ್ (rtd) ವಿಜಯ ಬ್ಯಾಂಕ್
ಡಾ.ಜಯಪ್ರಕಾಶ್ ಶೆಟ್ಟಿ, ಅಸಿಸ್ಟೆಂಟ್ ಡೈರೆಕ್ಟರ್ (rtd),
ರಾಧಾಕೃಷ್ಣ ಶೆಟ್ಟಿ ಚಲ್ಲಡ್ಕ, ಬಾಲಕೃಷ್ಣ ಶೆಟ್ಟಿ ಬೆಂಗ್ರೊಡಿ, ಪ್ರಭಾಕರ್ ಶೆಟ್ಟಿ ದಂಬೆಕಾನ, ಪುರುಷೋತ್ತಮ ಕಲ್ಲಂಗಳ, ಸತ್ಯನಾರಾಯಣ ಭಟ್, ಬಾಲಕೃಷ್ಣ ಕಾರಂತ, ಜನಾರ್ದನ ಭಟ್ ಅಮೈ, ಯಶಸ್ವಿನಿ ಶಾಸ್ತ್ರಿ, ರಾಜೇಶ್ ಕರವೀರ, ಸುಧಾಕರ ಬಡಕೋಡಿ, ಜಗಜೀವನ್ ರಾಮ್ ಶೆಟ್ಟಿ ಬೆಡೆಮಾರ್, ಸಂಚಿತಾ ಜಗಜೀವನ್ ಶೆಟ್ಟಿ, ರಕ್ಷ ರೂಪಿತ್ ರೈ, ಬಾಲಚಂದ್ರ ನಾಯಕ್, ರಮಾನಾಥ್ ವಿಟ್ಲ ಉಪಸ್ಥಿತರಿದ್ದರು.

























