ಕುಂಡಡ್ಕ: ಬಿಲ್ಲವ ಸಂಘ ಕುಂಡಡ್ಕದ ಬೆಳ್ಳಿ ಹಬ್ಬದ ಪ್ರಯುಕ್ತ ಮೊದಲನೇ ಕಾರ್ಯಕ್ರಮವನ್ನು ಕನ್ಯಾನ ಭಾರತ್ ಸೇವಾಶ್ರಮಕ್ಕೆ ಪಡಿತರ ಸಾಮಗ್ರಿಗಳನ್ನು ವಿತರಿಸುವ ಮೂಲಕ ಭಾನುವಾರ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಬಿಲ್ಲವ ಸಂಘದ ಅಧ್ಯಕ್ಷರಾದ ವಿನೋದ್ ಕುಮಾರ್, ಸ್ಥಾಪಕಾಧ್ಯಕ್ಷರಾದ ನಾರಾಯಣ ಎಸ್.ಕೆ., ಯತೀಶ್ ಬೇರಿಕೆ, ಗಂಗಾಧರ ನೀರಕೋಡಿ ಹಾಗೂ ಯುವವಾಹಿನಿ ಅಧ್ಯಕ್ಷರಾದ ಕೆ.ಟಿ. ಆನಂದ್ ಉಪಸ್ಥಿತರಿದ್ದರು. ಸೇವಾಶ್ರಮದ ಸೇವಾರ್ಥಿಗಳಿಗೆ ಅಗತ್ಯವಿರುವ ಪಡಿತರ ಸಾಮಗ್ರಿಗಳನ್ನು ಸಂಘದ ವತಿಯಿಂದ ಹಸ್ತಾಂತರಿಸಲಾಯಿತು.
ಇದೇ ಸಂದರ್ಭದಲ್ಲಿ ಬೆಳ್ಳಿ ಹಬ್ಬದ ಪ್ರಧಾನ ಸಂಚಾಲಕರಾದ ಎಂ.ಎಸ್. ನವೀನ್ ಪಟ್ಲ ಅವರ ಪುತ್ರ ಮನ್ವಿತ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸೇವಾಶ್ರಮದ ನಿವಾಸಿಗಳಿಗೆ ಹಣ್ಣು ಹಂಪಲು ಹಾಗೂ ಸಿಹಿತಿಂಡಿಗಳನ್ನು ವಿತರಿಸಿ ಮಾನವೀಯತೆ ಮೆರೆದರು.
ಸಮಾಜಮುಖಿ ಸೇವಾ ಕಾರ್ಯಗಳ ಮೂಲಕ ಬೆಳ್ಳಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹಲವು ಸೇವಾ ಚಟುವಟಿಕೆಗಳು ನಡೆಯಲಿವೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

























