ಸುಬ್ರಹ್ಮಣ್ಯ: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಕ್ತರು ವಿಶೇಷ ರೀತಿಯಲ್ಲಿ ಪುಷ್ಪಾಲಂಕಾರ ಸೇವೆ ಮಾಡಿದ್ದಾರೆ.
ದೇವಸ್ಥಾನದ ಒಳಾಂಗಣ ಪ್ರವೇಶ ಸ್ಥಳದಲ್ಲಿ ವಿವಿಧ ಬಗೆಯ ಹೂವುಗಳಿಂದ ಅಲಂಕಾರ ಮಾಡಲಾಗಿದೆ. ದೇವಸ್ಥಾನದ ಗೋಪುರದ ಎದುರು ಕಬ್ಬು, ತೆಂಗಿನ ಗರಿ, ಹಣ್ಣು-ಹಂಪಲುಗಳಿಂದ ಆಕರ್ಷಕ ಸಾಂಪ್ರದಾಯಿಕ ದ್ವಾರದ ಮೂಲಕ ಅಲಂಕಾರ ಮಾಡಲಾಗಿದೆ.
ದೇವಸ್ಥಾನದ ಹೊರಾಂಗಣದಲ್ಲೂ ವಿವಿಧ ಬಗೆಯ, ಹೂವುಗಳು, ಹಣ್ಣುಗಳಿಂದ ಅಲಂಕಾರ ಮಾಡಲಾಗಿದೆ. ಬೆಂಗಳೂರಿನ ಭಕ್ತರೋರ್ವರು ಈ ಸೇವೆ ನೆರವೇರಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪ್ರತೀ ವರ್ಷ ಹೊಸ ವರ್ಷಕ್ಕೆ ಬೆಂಗಳೂರಿನ ಭಕ್ತರು ಲಕ್ಷಾಂತರ ರೂ. ವೆಚ್ಚದಲ್ಲಿ ಹೂವಿನ ಅಲಂಕಾರ ಮಾಡುತ್ತಿದ್ದು, ಅದರಂತೆ ಈ ವರ್ಷವೂ ಭಕ್ತರು ಪುಷ್ಪಾಲಂಕಾರ ಸೇವೆ ನೆರವೇರಿಸಿದ್ದಾರೆ.


























