ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರೆಯ ಪ್ರಯುಕ್ತ ಗೊನೆ ಮುಹೂರ್ತ ಕಾರ್ಯಕ್ರಮವು ವಿಲಿಯಂ ತೋರಸ್ ಅವರ ತೋಟದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.
ಈ ಸಂದರ್ಭದಲ್ಲಿ ವಿಟ್ಲ ಅರಮನೆಯ ಸದಾಶಿವ ಕೆ.ಆರ್., ಕೃಷ್ಣಯ್ಯ ಕೆ., ಶಿವಪ್ರಾದ್, ಜಯರಾಂ ಬಲ್ಲಾಳ, ಶ್ರೀಕಂಠ ವರ್ಮ, ರವಿ ವರ್ಮ, ಅನಂತ ಪ್ರಸಾದ್, ಮುರಳಿ, ನಂದನ್, ರಾಮಣ್ಣ ಗೌಡ (ಬಸವನಗುಡಿ), ಪದ್ಮನಾಭ ಗೌಡ, ಅಣ್ಣು ಗೌಡ, ಡೊಂಬಯ್ಯ, ಸಂಜೀವ ಗೌಡ, ಸೋಮಣ್ಣ, ಶಿವಣ್ಣ ಕಟ್ಟೆ, ಸಂತೋಷ್ ಗೌಡ, ಗೋಪಾಲ ಜೋಗಿ ಸೇರಿದಂತೆ ಬಳಗದ ಸದಸ್ಯರು ಹಾಗೂ ಅನೇಕ ಭಕ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮವು ಸಂಪ್ರದಾಯಬದ್ಧ ವಿಧಿವಿಧಾನಗಳೊಂದಿಗೆ ಯಶಸ್ವಿಯಾಗಿ ನಡೆಯಿತು. ದೇವಸ್ಥಾನದ ಜಾತ್ರೆ ಯಶಸ್ವಿಯಾಗಲೆಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

























