ಪುತ್ತೂರು: ಕರ್ನಾಟಕದಲ್ಲಿ ಎಸ್‌ಐಆರ್ ಗೆ ಇನ್ನೂ ಅಧಿಕೃತ ಆದೇಶವಾಗಿಲ್ಲ ಆದರೂ ಕೆಲವು ಕಡೆಗಳಲ್ಲಿ ಬಿಎಲ್‌ಒಗಳಿಗೆ ಮತದಾರ ಪಟ್ಟಿ ಪರಿಷ್ಕರಣೆ ( ಮ್ಯಾಪಿಂಗ್) ನಡೆಸು ಆದೇಶ ನೀಡಿದ್ದೀರಿ, ಯಾವ ಆಧಾರದಲ್ಲಿ ಈ ಮ್ಯಾಪಿಂಗ್ ಪ್ರಕ್ರಿಯೆ ನನಡೆಸುತ್ತಿದ್ದೀರಿ, ನಿಮ್ಮ ಮ್ಯಾಪಿಂಗ್ ಪ್ರಕ್ರಿಯೆ ಬಗ್ಗೆ ಅನೇಕ ದೂರುಗಳು ಬಂದಿದೆ. ನೀವು ಮಾಡುತ್ತಿರುವ ಮ್ಯಾಪಿಂಗ್ ಪಕ್ರಿಯೆಯನ್ನು ತಕ್ಷಣ ನಿಲ್ಲಿಸಿ, ಈ ವಿಚಾರದಲ್ಲಿ ಎ ಸಿ, ತಹಶಿಲ್ದಾರ್ ಸೇರಿದಂಂತೆ ಚುನಾವಣಾ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳನ್ನು ಸೇರಿಸಿ ಸರ್ವ ಪಕ್ಷಗಳ ಸಭೆ ಕರೆಯುತ್ತೇನೆ ಆ ಬಳಿಕ ಮ್ಯಾಪಿಂಗ್ ಕಾರ್ಯ ಮುಂದುವರೆಸಿ ಎಂದು ಜಿಲ್ಲಾ ಮ್ಯಾಪಿಂಗ್ ಪರಿಷಕರಣೆಯ ಕೇಸ್ ವರ್ಕರ್ ಶಿವಾನಂದ ವೆಂಕಟೇಶ್ ಅವರಿಗೆ ಶಾಸಕ ಅಶೋಕ್ ರೈ ಸೂಚನೆ ನೀಡಿದ್ದಾರೆ.
ವಿಟ್ಲದಲ್ಲಿ ಇಂದು ನಡೆದ ಬಿಎಲ್‌ಎ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಳೆ ಬಿಎಲ್‌ಎ ಗಳಿಂದ ಮತದಾರ ಪಟ್ಟಿ ಪರಿಷ್ಕರಣೆ ಮ್ಯಾಪಿಂಗ್ ಬಗ್ಗೆ ಹಲವಾರು ದೂರುಗಳು ಬಂದವು. ಬಿಎಲ್‌ಒಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ. ಬೇಕಾಬಿಟ್ಟಿ ಮ್ಯಾಪಿಂಗ್ ಮಾಡುತ್ತಿದ್ದಾರೆ. ಅವರಿಗೂ ಇಲಾಖೆಯಿಂದ ಹೇಗೆ ಮ್ಯಾಪಿಂಗ್ ಮಾಡಬೇಕು ಎಂಬ ತರಬೇತಿಯನ್ನೂ ನೀಡಿಲ್ಲ. ಎಸ್‌ಐಆರ್ ಬಗ್ಗೆ ಬಿಎಲ್‌ಒಗಳಿಗೆ ಯಾವುದೇ ಮಾಹಿತಿ ಇಲ್ಲ. ಸರಕಾರದಿಂದ ಅಧಿಕೃತ ಆದೇಶವೂ ಬಂದಿಲ್ಲ ಅದು ಹೇಗೆ ಇವರು ಮ್ಯಾಪಿಂಗ್ ಮಾಡುತ್ತಿದ್ದಾರೆ. ಖಾಲಿ ಪತ್ರಕ್ಕೆ ಸಹಿ ಹಾಕಿ ತೆಗೆದುಕೊಳ್ಳುತ್ತಿದ್ದು ಅದು ಯಾಕೆ ಎಂದು ಕೇಳಿದರೆ ಅವರ ಬಳಿ ಅಮರ್ಪಕ ಉತ್ತರವಿಲ್ಲ. ಮ್ಯಾಪಿಂಗ್ ಸರಿ ಹೊಂದದ ಹೆಸರುಗಳನ್ನು ಅಳಿಸಿ ಹಾಕಿದರೆ ಅದಕ್ಕೆ ಯಾರು ಜವಾಬ್ದಾರರು? ಈಗಾಗಲೇ ಬಿಹಾರದಲ್ಲಿ ೫೦ ಲಕ್ಷ ಮತದಾರರನ್ನು ಕೈ ಬಿಟ್ಟಿದ್ದಾರೆ. ಚುನಾವಣಾ ಆಯೋಗ ಅಥವಾ ಜಿಲ್ಲಾ ಚುನಾವಣಾ ಅಧಿಕಾರಿಗಳು ಈ ಬಗ್ಗೆ ಜನತೆಗೆ ಸ್ಪಷ್ಟನೆ ನೀಡದೇ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ ಎಂಬ ಆರೋಪಗಳು ಕೇಳಿ ಬಂದವು.
ಕೇಸ್‌ವರ್ಕರ್‌ಗೆ ಕರೆ ಮಾಡಿದ ಶಾಸಕರು: ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾ ಇಲಾಖೆಯ ಮ್ಯಾಪಿಂಗ್ ಕೇಸ್ ವರ್ಕರ್ ಶಿವಾನಂದ ವಂಕಟೇಶ್ ಅವರಿಗೆ ಕರೆ ಮಾಡಿ ಮತದಾರ ಪಟ್ಟಿ ಪರಿಷ್ಕರಣೆ ಮತ್ತು ಮ್ಯಾಪಿಂಗ್ ಪ್ರಕ್ರಿಯೆ ಹೇಗೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಸರಕಾರದಿಂದ ಅಧಿಕೃತ ಆದೇಶ ಬಂದಿರುವ ಬಗ್ಗೆ ಪ್ರಶ್ನಿಸಿದ ಶಾಸಕರು ನಿಮ್ಮಿಷ್ಟಕ್ಕೆ ಈ ಕೆಲಸವನ್ನು ಮಾಡುವುದು ಬೇಡ. ಈ ಬಗ್ಗೆ ಪುತ್ತೂರು ಸಹಾಯಕ ಕಮಿಷನರ್, ತಹಶಿಲ್ದಾರ್, ಚುನಾವಣಾ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆ ಸರ್ವ ಪಕ್ಷಗಳ ಸಭೆ ಕರೆದು ಈ ಬಗ್ಗೆ ಪೂರ್ಣ ಮಾಹಿತಿ ಜನತೆಗೆ ನೀಡಬೇಕು.
ಜನರಲ್ಲಿರುವ ಗೊಂದಲವನ್ನು ಪರಿಹಾರ ಮಾಡಿದ ಬಳಿಕ ನಿಮ್ಮ ಪ್ರಕ್ರಿಯೆ ಮುಂದುವರೆಸಬೇಕು ಅಲ್ಲಿಯತನಕ ಯಾವುದೇ ಪ್ರಕ್ರಿಯೆಯನ್ನು ನಡೆಸದಂತೆ ಶಾಸಕರು ಸೂಚನೆ ನೀಡಿದರು. ಅದರಂತೆ ಶೀಘ್ರ ಸಭೆ ಕರೆಯುವುದಾಗಿಯೂ ಶಾಸಕರು ತಿಳಿಸಿದರು.

























