ಪುತ್ತೂರು ತಾಲೂಕಿನ ರುಕ್ಮಯ್ಯ ಗೌಡ (66) ಅವರ 34 ವರ್ಷದ ಮಗಳು ಹಾಗೂ ಆಕೆಯ 3 ವರ್ಷದ ಮಗುವು ಕೆರೆಯಲ್ಲಿ ಮೃತ ಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಈ ಸಂಬಂಧ ಮೃತ ಮಹಿಳೆಯ ತಂದೆಯಾದ ರುಕ್ಮಯ್ಯ ಗೌಡ ಅವರು ನೀಡಿದ ದೂರಿನ ಅನ್ವಯ, ದಿನಾಂಕ 04-01-2026ರಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 01/2026 ಕಲಂ 103 BNS-2023ರಂತೆ ಪ್ರಕರಣ ದಾಖಲಾಗಿದೆ.
ಇದೇ ಘಟನೆಯ ಕುರಿತು ಮೃತ ಮಹಿಳೆಯ ಮರಣದಲ್ಲಿ ಅನುಮಾನವಿದೆ ಎಂದು ರತ್ನಾವತಿ (55), ಪುತ್ತೂರು ತಾಲೂಕು ಅವರು ನೀಡಿದ ದೂರಿನ ಆಧಾರದ ಮೇಲೆ, ದಿನಾಂಕ 04-01-2026ರಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್. ನಂ. 01/2026 ಕಲಂ 194(3)(i)(iv) BNSS-2023ರಂತೆ ಮತ್ತೊಂದು ಪ್ರಕರಣವೂ ದಾಖಲಾಗಿದೆ.
ಘಟನೆಯ ಕುರಿತು ದಾಖಲಾದ ಎರಡೂ ಪ್ರಕರಣಗಳನ್ನು ಪರಿಗಣಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

























