ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಹೊಸಬೆಟ್ಟು–ಇರುಬೈಲು ನಿವಾಸಿ ದಿವಂಗತ ವಿಶ್ವನಾಥ ಪೂಜಾರಿ ಅವರ ಅಶಕ್ತ ಕುಟುಂಬಕ್ಕೆ ಪುತ್ತಿಲ ಅಭಿಮಾನಿ ಬಳಗ – ಪೆರ್ನೆ ವತಿಯಿಂದ ರೂ.32,000 ಧನಸಹಾಯವನ್ನು ಹಸ್ತಾಂತರಿಸಲಾಯಿತು. ಈ ಧನಸಹಾಯವನ್ನು ಹಿಂದೂ ಮುಖಂಡರಾದ ಅರುಣ್ ಕುಮಾರ್ ಪುತ್ತಿಲರವರ ಮುಖಾಂತರ ಕುಟುಂಬಕ್ಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಕಾರ್ತಿಕ್ ಭಂಡಾರಿ (ಪೆರ್ನೆ), ವಸಂತ ಶೆಟ್ಟಿ (ಮನ್ನೇವು), ಸುಕೇಶ್ ಪೂಜಾರಿ (ಕಳೆಂಜ), ರಾಜಶೇಖರ ಶೆಟ್ಟಿ (ಹಿರುಬೈಲು), ಸೀತಾರಾಮ್ ಶೆಟ್ಟಿ (ಹಿರುಬೈಲು), ಕೀರ್ತನ್ ಗೌಡ ಹಾಗೂ ಪುತ್ತಿಲ ಪರಿವಾರ ಪೆರ್ನೆ ಘಟಕದ ಸದಸ್ಯರು ಉಪಸ್ಥಿತರಿದ್ದರು.
ಪುತ್ತಿಲ ಅಭಿಮಾನಿ ಬಳಗವು ಸಮಾಜಮುಖಿ ಕಾರ್ಯಗಳ ಮೂಲಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನಿರಂತರವಾಗಿ ಸಹಾಯ ಮಾಡುತ್ತಿದ್ದು, ಈ ಧನಸಹಾಯವೂ ಅದರ ಒಂದು ಭಾಗವಾಗಿದೆ ಎಂದು ಸಂಘಟನೆಯ ಸದಸ್ಯರು ತಿಳಿಸಿದರು.


























