ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೆಯ ಅಂಗವಾಗಿ, ಸಮರ್ಪಣ್ ವಿಟ್ಲ ಇವರ ವತಿಯಿಂದ ಜನವರಿ 16 ರಂದು ನಡೆಯಲಿರುವ ಸಮರ್ಪಣ್ ಕಲೋತ್ಸವ–2026 ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗೆ ಗೌರವಾರ್ಪಣೆ ಹಾಗೂ ಸಮರ್ಪಣ್ ವಿದ್ಯಾನಿಧಿ ವಿತರಣೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು.
ಶ್ರೀ ಪಂಚಲಿಂಗೇಶ್ವರ ದೇವರ ನಿತ್ಯೋತ್ಸವದಂದು ನಡೆಯುವ ಈ ಕಾರ್ಯಕ್ರಮದ ಅಂಗವಾಗಿ, ಚೈತನ್ಯ ಕಲಾವಿದರು ಬೈಲೂರು ಇವರಿಂದ “ರಾಘು ಮಾಸ್ಟ್ರು” ಎಂಬ ಹಾಸ್ಯಮಯ ತುಳು ನಾಟಕವು ವಿಶೇಷ ದೃಶ್ಯ ಸಂಯೋಜನೆಯೊಂದಿಗೆ ಪ್ರದರ್ಶನಗೊಳ್ಳಲಿದೆ.
ಆಮಂತ್ರಣ ಪತ್ರಿಕೆಯನ್ನು ವಿಟ್ಲದ ಹಿರಿಯ ಸ್ವಯಂಸೇವಕರಾದ ಶ್ರೀ ಈಶ್ವರ ಡಿ. ಕೂಜಪ್ಪಾಡಿ ಅವರು ಬಿಡುಗಡೆಗೊಳಿಸಿದರು. ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ನಾರಾಯಣ ಪ್ರಸಾದ್ ಬನ್ನಿಂತಾಯ ಅವರು ಪ್ರಾರ್ಥನೆ ನೆರವೇರಿಸಿದರು.
ಈ ಸಂದರ್ಭ ಸಮರ್ಪಣ್ ವಿಟ್ಲ ಅಧ್ಯಕ್ಷರಾದ ಯಶವಂತ ಎನ್., ಗೌರವಾಧ್ಯಕ್ಷರಾದ ಕೃಷ್ಣಯ್ಯ ಕೆ. (ವಿಟ್ಲ ಅರಮನೆ), ಉಪಾಧ್ಯಕ್ಷರಾದ ಯಾದವ ಮಡಿವಾಳಕೋಡಿ, ಸೂರಜ್ ಕೋಟ್ಯಾನ್, ರವಿವರ್ಮ (ವಿಟ್ಲ ಅರಮನೆ), ಕಾರ್ಯದರ್ಶಿ ರೋಹಿತ್ ಕಟ್ಟೆ, ಕೋಶಾಧಿಕಾರಿ ನಿಖಿಲ್ ಸಾಲ್ಯಾನ್, ಗೌರವ ಸಲಹೆಗಾರರಾದ ಮೋನಪ್ಪ ಗೌಡ (ಶಿವಾಜಿನಗರ), ವಿಶ್ವನಾಥ ನಾಯ್ತೋಟ್ಟು, ಸಂಘಟನಾ ಕಾರ್ಯದರ್ಶಿ ರವಿಶಂಕರ್, ಸಂಚಾಲಕರಾದ ಹರೀಶ್ ಕೆ. ವಿಟ್ಲ ಉಪಸ್ಥಿತರಿದ್ದರು.
ಅದೇ ರೀತಿ ಸದಸ್ಯರಾದ ಪವನ್ ಕಟ್ಟೆ, ಮನೋಜ್ ವಿಟ್ಲ, ಅಭಿ (ಶಿವಾಜಿನಗರ), ದೀಕ್ಷಿತ್, ಗಣೇಶ್, ಕೌಶಿಕ್, ಲಿಖಿತ್ ಸೇರಿದಂತೆ ವಿಟ್ಲ ಪಟ್ಟಣ ಪಂಚಾಯತ್‌ನ ಸ್ಥಾಯಿ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಶ್ರೀ ರವಿ ಪ್ರಕಾಶ್, ಪ್ರಸಾದ್ (ವಿಟ್ಲ ಅರಮನೆ), ಮೋಹನ್ ಕಟ್ಟಿ, ಕೃಷ್ಣಪ್ಪ ಪಳೇರಿ, ಶ್ರೀಮತಿ ಬೇಬಿ ನೆಕ್ಕರೆಕಾಡು ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ಸಮರ್ಪಣ್ ಸೇವಾ ಪ್ರಕಲ್ಪದಡಿ ವಿದ್ಯಾನಿಧಿ ವಿತರಣೆ ನಡೆಯಲಿರುವುದು ವಿಶೇಷವಾಗಿದೆ.


























