ಅನಾರೋಗ್ಯದಲ್ಲಿರುವ ಪೆರ್ನೆ ಗ್ರಾಮದ ಅರ್ಬಿ ನಿವಾಸಿ ಬಾಲಕೃಷ್ಣಗೌಡ ಹಾಗೂ ತಿಮ್ಮಕ್ಕ ಇವರಿಗೆ “ಅರುಣ ಸಾರಥಿ” ಚಾಲಕರ ಸಂಘಟನೆಯ ವತಿಯಿಂದ 10,000 ರೂಪಾಯಿ ಧನಸಹಾಯವನ್ನು “ಪುತ್ತಿಲ ಪರಿವಾರ ಸೇವಾ ಟ್ರಸ್ಟ್” ನ ಸಂಚಾಲಕ “ಅರುಣ್ ಕುಮಾರ್ ಪುತ್ತಿಲ” ಅವರ ಉಪಸ್ಥಿತಿಯಲ್ಲಿ ಅಶಕ್ತ ಕುಟುಂಬಕ್ಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಸದಸ್ಯರಾದ ಸಂದೇಶ್ ನಾೖಕ್ ಕೆಯ್ಯೂರು,ತೀರ್ಥರಾಮ ಜಿಡೆಕಲ್ಲು,ಶಿವಪ್ರಸಾದ್ ಪುತ್ತೂರು,ಪ್ರವೀಣ್ ಕೆಮ್ಮಾಯಿ,ಕಾರ್ತಿಕ್ ಭಂಡಾರಿ ಪೆರ್ನೆ,ಸುಕೇಶ್ ಪೂಜಾರಿ ಕಳೆಂಜ,ವಸಂತ ಶೆಟ್ಟಿ,ಕೀರ್ತನ್ ಗೌಡ ಇರುಬೈಲು ಮೊದಲಾದವರು ಉಪಸ್ಥಿತಿಯಿದ್ದರು.
ಅರುಣ ಸಾರಥಿ ಸಂಘಟನೆಯ ವತಿಯಿಂದ ಈವರೆಗೆ ಒಟ್ಟು 1,40,000 ರೂಪಾಯಿ ಧನಸಹಾಯವನ್ನು ಅನಾರೋಗ್ಯದಲ್ಲಿರುವವರಿಗೆ ನೀಡಲಾಗಿದೆ.


























