ವಿಟ್ಲ:ಠಾಣಾ ವ್ಯಾಪ್ತಿಯಲ್ಲಿ ತಾಯಿ, ಮಗಳು ನಾಪತ್ತೆಯಾಗಿರುವ ಕುರಿತು ದೂರು ದಾಖಲಾಗಿದೆ.
ಕೊಳ್ಳಾಡು ಅಗರಿ ಮನೆ ಸಾಲೆತ್ತೂರು ಎಂಬಲ್ಲಿನ ಮಹಮ್ಮದ್ ಮುಸ್ತಾಫ(30ವ.) ಎಂಬವರು ಈ ಕುರಿತು ದೂರು ನೀಡಿದ್ದಾರೆ.
ತಾಯಿ ಸಾರಮ್ಮ ಮತ್ತು ಅಕ್ಕ ನೆಫಿಸತುಲ್ ಮಿಯಾರವರು ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.’ನಾನು ಜ.05ರಂದು ಬೆಳಿಗ್ಗೆ ನಾಟೆಕಲ್ ಮದರಸದಲ್ಲಿ ಪಾಠ ಮಾಡಲು ಹೋಗಿ ವಾಪಸ್ ಮನೆಗೆ ಬಂದಿದ್ದ ವೇಳೆ ತಾಯಿ ಸಾರಮ್ಮ ಹಾಗೂ ಅಕ್ಕ ನೆಪಿಸತುಲ್ ಮಿಶ್ರೀಯಾರವರು ಮನೆಯಲ್ಲಿ ಇದ್ದರು.ನoತರ ನಾನು ಪತ್ನಿ ತೌಸಿನಾಳನ್ನು ಆಕೆಯ ತವರು ಮನೆ ಇರಾ ಎಂಬಲ್ಲಿಂದ ಕರೆದುಕೊಂಡು ಬಂದು ಸಂಜೆ ಮನೆಗೆ ಬಂದಾಗ ಮನೆ ಬಾಗಿಲಿಗೆ ಬೀಗ ಹಾಕಿರುವುದು ಕಂಡು ಬಂದಿತ್ತು.
ಮನೆಯ ಬೀಗದ ಕೀಯನ್ನು ಪಕ್ಕದ ಮನೆಯಲ್ಲಿ ನೀಡಿ ತಾಯಿ ಸಾರು ಹಾಗೂ ಅಕ್ಕ ನಫೀಸತತುಲ್ ಮಿಶ್ರೀಯಾರನ್ನು ಕರೆದುಕೊಂಡು ಹೋಗಿರುವ ಬಗ್ಗೆ ತಿಳಿಸಿದರು. ಆದರೆ ರಾತ್ರಿಯಾದರು ಮನೆಗೆ ಬಾರದೇ ಇರುವುದರಿಂದ ಮನೆ ಬಳಿ ಸಾಲೆತ್ತೂರು ಪ್ರದೇಶಗಳಲ್ಲಿ ಮತ್ತು ಕುಟುಂಬಸ್ಥರ ಮನೆಗಳಲ್ಲಿ ಹುಡುಕಾಡಿದರೂ ಈವರೆಗೂ ತಾಯಿ ಮತ್ತು ಅಕ್ಕ ಪತ್ತೆಯಾಗಿರುವುದಿಲ್ಲ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



























