ಇಬ್ಬರು ಪರಸ್ಪರ ಚಿಕ್ಕಪ್ಪ ದೊಡ್ಡಪ್ಪ ಮಕ್ಕಳು. ಆತನಿಗೆ 30 ವರ್ಷ, ಆಕೆಗೆ 21 ವರ್ಷ. ಆದರೂ ಅವರಿಬ್ಬರು ಅಣ್ಣ ತಂಗಿ ಪವಿತ್ರ ಸಂಬಂಧಕ್ಕೆ ವಿರುದ್ದವಾಗಿ ಪರಸ್ಪರ ಪ್ರೀತಿಸಿ ಅಕ್ರಮ ಸಂಬಂಧ ಹೊಂದಿದ್ದು, ಸಾಲದಕ್ಕೆ ಈ ಜೋಡಿ ಲಿವಿಂಗ್ ರಿಲೇಷನ್ ಶಿಪ್ನಲ್ಲಿ ಇದ್ದರು.
ಆದ್ರೆ, ಇದೀಗ ಆಕೆ ಏಕಾಏಕಿ ಶವವಾಗಿ ಪತ್ತೆಯಾಗಿದ್ದಾಳೆ. ಹೌದು..21 ವರ್ಷದ ಯುವತಿ ರಾಮಲಕ್ಷ್ಮಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ನಡೆದಿದ್ದು, ಈ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ.
ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ರಾಮಕೃಷ್ಣಪುರದ ನಿವಾಸಿಗಳಾದ ರಾಮಲಕ್ಷ್ಮಿ ಹಾಗೂ ಕೃಷ್ಣ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ರಾಮಕೃಷ್ಣಪುರದ ನಿವಾಸಿಗಳಾಗಿದ್ದು, ಸಂಬಂಧದಲ್ಲಿ ಅಣ್ಣ ತಂಗಿ. ಆದ್ರೆ, ಅಣ್ಣ ತಂಗಿಯ ಪ್ರೀತಿ ಲಿವಿಂಗ್ ರಿಲೇಶನ್ ಶಿಪ್ ತಿರುಗಿದ್ದು, ಇಬ್ಬರೂ ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ಮನೆ ಮಾಡಿಕೊಂಡು ವಾಸವಿದ್ದರು. ಆದ್ರೆ ಇಂದು ರಾಮಲಕ್ಷ್ಮಿ ಮನೆನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಶವ ಪತ್ತೆಯಾಗಿದೆ.
ರಾಮಲಕ್ಷ್ಮಿ ಹಾಗೂ ಕೃಷ್ಣ ಕಳೆದ ಮೂರು ವರ್ಷಗಳಿಂದ ಪ್ರೀತಿ ಪ್ರೇಮ ಅಂತ ಅನೈತಿಕ ಸಂಬಂಧ ಹೊಂದಿದ್ದರು. ಇದರಿಂದ ಎರಡು ಕುಟುಂಬಗಳ ಬಂಧು ಬಳಗ, ಇಬ್ಬರಿಗೂ ಬೈಯ್ದು ಬುದ್ದಿವಾದ ಹೇಳಿದ್ದರು. ಕೊನೆಗೆ ರಾಮಕೃಷ್ಣಪುರದಲ್ಲಿ ಒಂದು ಕುಟುಂಬ. ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಒಂದು ಕುಟುಂಬವಾಗಿ ಪ್ರತ್ಯೇಕವಾಗಿ ನೆಲೆಸಿದ್ರು. ಮತ್ತೊಂದೆಡೆ ಕೃಷ್ಣನಿಗೆ ಬೇರೆ ಹುಡುಗಿಯೊಬ್ಬಳ ಜೊತೆ ಮದುವೆಯನ್ನು ಮಾಡಿದ್ದರು. ಆದರೂ ಕೃಷ್ಣ ತನ್ನ ತಂಗಿ ರಾಮಲಕ್ಷ್ಮಿಯನ್ನು ಬಿಟ್ಟಿಲ್ಲ. ಆಕೆಯ ತಲೆ ಕೆಡಿಸಿ ಪ್ರತ್ಯೇಕ ಮನೆ ಮಾಡಿ ಕಳ್ಳ ಸಂಸಾರ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಆದ್ರೆ, ಇದೀಗ ರಾಮಲಕ್ಷ್ಮಿ ಆತ್ಮಹತ್ಯೆಗೆ ಶರಣಾಗಿದ್ದು, ಸಾವಿಗೆ ಅಣ್ಣ ವರಸೆಯ ಕೃಷ್ಣನೆ ಕಾರಣ ಎಂದು ಮೃತಳ ಅಕ್ಕ ಆಕ್ರೋಶ ವ್ಯಕ್ತಪಡಿಸಿದ್ದಾಳೆ.
ಒಟ್ಟಿನಲ್ಲಿ ಅಣ್ಣ ತಂಗಿಯ ಸಂಬಂಧ ಜನುಮ ಜನುಮದ ಅನುಬಂಧ ಎನ್ನುವ ಪವಿತ್ರೆಗೆ ದಕ್ಕೆ ತಂದಿದ್ದು, ತಂಗಿ ಸಾವಿನ ಮನೆ ಸೇರಿದ್ರೆ, ಅಣ್ಣ ಭಯದಿಂದ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಪೆರೇಸಂದ್ರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.


























