ಪೈಚಾರ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಹಿಂಬದಿಗೆ ಚಲಿಸಿ ರಸ್ತೆ ಬದಿಯ ಪ್ರಯಾಣಿಕರ ತಂಗುದಾಣಕ್ಕೆ ಗುದ್ದಿ ತಂಗುದಾಣ ನಜ್ಜುಗುಜ್ಜುಗೊಂಡಿದ್ದು ಬಸ್ಸಿಗಾಗಿ ಕಾಯುತ್ತಿದ್ದ ಇಬ್ಬರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿ ಅಪಾಯದಿಂದ ಪಾರಾದ ಘಟನೆ ಜನವರಿ 8 ರಂದು ಸಂಭವಿಸಿದೆ.
ಪೈಚಾರಿನಿಂದ ಸೋಣಂಗೇರಿ ಕಡೆಗೆ ತಿರುಗುವಲ್ಲಿ ರಸ್ತೆ ಬದಿಯಲ್ಲಿ ಲಾರಿ ಚಾಲಕ ಲಾರಿ ನಿಲ್ಲಿಸಿ ತಿಂಡಿ ತಿನ್ನಲು ಹೋಟೆಲ್ ಗೆ ಹೋಗಿದ್ದರು ಎನ್ನಲಾಗಿದೆ.ಬಳಿಕ ಬಂದು ಲಾರಿಯನ್ನು ಸ್ಟಾರ್ಟ್ ಮಾಡುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಏಕಾಏಕಿ ಹಿಂಭಾಗಕ್ಕೆ ಚಲಿಸಿ ರಭಸವಾಗಿ ಬಂದು ತಂಗುದಾಣಕ್ಕೆ ಡಿಕ್ಕಿ ಹೊಡೆದಿದೆ.



























