ಪುತ್ತೂರು: ಪ್ರೀತಿಯಿಂದ ಸಾಕಿದ್ದ shitzoo ತಳಿಯ ನಾಯಿ ಕಾಣೆಯಾಗಿರುವ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲ್ಲಿಕಟ್ಟೆಯ ಮಲ್ಯ ಕಾಂಪೌಂಡ್ ಬಳಿಯ ಪೂನಮ್ ಶೆಟ್ಟಿ ಈ ಬಗ್ಗೆ ದೂರು ನೀಡಿದ್ದು ತಮ್ಮ ಬಾಬ್ರು ಎಂಬ shitzo ತಳಿಯ ನಾಯಿ ಕಾಣೆಯಾಗಿದೆ ಮತ್ತು ಕೆಲ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.


























