ರಾಮಕುಂಜಕ್ಕೆ ಬರಲು ಹೇಳಿ ಹಣದ ವಿಚಾರಕ್ಕೆ ಸಂಬಂಧಿಸಿ ತಗಾದೆ ತೆಗೆದು ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಸವಣೂರು ಚಾಪಳ್ಳ ನಿವಾಸಿ ಅಬ್ದುಲ್ ಖಾದರ್ ಎಂಬವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಅಬ್ದುಲ್ ಖಾದರ್ ಅವರಿಗೆ ನ.15ರಂದು ಸಂಜೆ ಪರಿಚಯದ ಕೃಷ್ಣಪ್ಪ ಎಂಬವರು ದೂರವಾಣಿ ಕರೆ ಮಾಡಿ ರಾಮಕುಂಜ ಗ್ರಾಮದ ಕುಂಡಡ್ಕಕ್ಕೆ ಕೇಶವ ಎಂಬವರ ಮನೆಯ ಹತ್ತಿರಕ್ಕೆ ಬರುವಂತೆ ತಿಳಿಸಿದ್ದು, ಈ ವೇಳೆ ಕೊಯಿಲದಲ್ಲಿದ್ದ ಅಬ್ದುಲ್ ಖಾದರ್ ಅವರು ಪರಿಚಯದ ಸಂದೇಶ ಎಂಬವರೊಂದಿಗೆ ಹೋಗಿರುತ್ತಾರೆ.
ಆಗ ಅಲ್ಲಿದ್ದ ಗಂಗಾಧರ, ಆರೀಫ್, ಕೃಷ್ಣಪ್ಪ, ಸದಾಶಿವ ಎಂಬವರು ಅಬ್ದುಲ್ ಖಾದರ್‌ರನ್ನು ಅಡ್ಡಗಟ್ಟಿ ಅವರಿಗೆ ಕೊಡುವ ಹಣದ ವಿಚಾರದಲ್ಲಿ ತಗಾದೆ ತೆಗೆದು ಗಂಗಾಧರ ಎಂಬವರು ಮರದ ಸಲಾಕೆಯಿಂದ ತಲೆಯ ಹಿಂಬದಿಗೆ, ಕೃಷ್ಣಪ್ಪ ಪ್ಲಾಸ್ಟಿಕ್ ಚೇರ್‌ನಿಂದ ತಲೆಯ ಮೇಲೆ ಹಾಗೂ ಆರೀಫ್ ಮತ್ತು ಸದಾಶಿವ ಕೈಯಿಂದ ಮುಖಕ್ಕೆ ಗುದ್ದಿದ್ದು ಅಲ್ಲದೆ ಸದಾಶಿವ ಬಟ್ಟೆಯಿಂದ ಒತ್ತಿ ಹಿಡಿದಿರುವುದಾಗಿ ಆರೋಪಿಸಲಾಗಿದೆ.
ಆಗ ಅಲ್ಲೇ ಇದ್ದ ಸಂದೇಶ ಬಿಡಿಸಲು ಬಂದಿದ್ದು ಈ ವೇಳೆ ಅಬ್ದುಲ್ ಖಾದರ್ ಅವರು ತಪ್ಪಿಸಿಕೊಂಡು ಓಡಿ ಹೋಗಿರುತ್ತಾರೆ. ಬಳಿಕ ಅವರು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಇದೀಗ ಅಬ್ದುಲ್ ಖಾದರ್ ಅವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.



























