ಕುವೆಟ್ಟು: ಗುರುವಾಯನಕೆರೆಯ ಕುವೆಟ್ಟುವಿನ ಪಿಲಿಚಂಡಿಕಲ್ಲಿನಲ್ಲಿ ಗೀರ್ ತಳಿಯ ಎತ್ತುವಿಗೆ ಗೂಡ್ಸ್ ರಿಕ್ಷಾವೊಂದು ಡಿಕ್ಕಿ ಹೊಡೆದ ಪರಿಣಾಮ ಹಸು ರಸ್ತೆಯಲ್ಲೇ ಮೃತಪಟ್ಟ ಹೃದಯ ಕಲಕುವ ಘಟನೆ ನಡೆದಿದೆ.
ಕುವೆಟ್ಟು ನಿವಾಸಿಯಾದ ಕರಾರ್ ಎಂಬವರ ಮನೆಗೆ ಸೇರಿದ ಗೀರ್ ತಳಿ ಇದಾಗಿದ್ದು, ಒಂದೂವರೆ ವರ್ಷ ವಯಸ್ಸಿನದ್ದಾಗಿದೆ. ಸ್ಥಳೀಯರು ಹಾಗೂ ಮನೆಯವರು ಎತ್ತನ್ನು ಪ್ರೀತಿಯಿಂದ ಮುನ್ನಾ ಎಂದೇ ಕರೆಯುತ್ತಿದ್ದರು. ಸುತ್ತಮುತ್ತಲ ಜನರ ಪ್ರೀತಿಪಾತ್ರರಾಗಿದ್ದ ಮುನ್ನಾ ರಸ್ತೆಯಲ್ಲಿ ಸತ್ತು ಬಿದ್ದಿರುವುದು ಅವರನ್ನು ಆಘಾತಕ್ಕೀಡು ಮಾಡಿದೆ.
ಡಿಕ್ಕಿ ಹೊಡೆದ ಗೂಡ್ಸ್ ರಿಕ್ಷಾ ಗಾಡಿ ನಿಲ್ಲಿಸದೆ ಹೋಗಿದ್ದಾರೆ. ಕನಿಷ್ಠ ಮಾನವೀಯತೆಯೂ ಇಲ್ಲದೆ ಹೋಗಿದ್ದಾರೆ. ಎತ್ತನ್ನು ಉಳಿಸಲು ಸ್ಥಳೀಯರು ಪ್ರಯತ್ನಿಸಿದರೂ ಅದು ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದೆ. ಗೂಡ್ಸ್ ರಿಕ್ಷಾ ಹೊಡೆದ ತೀವ್ರತೆ ಜಾಸ್ತಿ ಇದ್ದ ಕಾರಣ ದಷ್ಟ ಪುಷ್ಟವಾಗಿದ್ದ ಗೀರ್ ಸ್ಥಳದಲ್ಲೇ ಮೃತಪಟ್ಟಿತು.



























