ಪುತ್ತೂರು:ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಪುತ್ತೂರು ಇದರ ಆಶ್ರಯದಲ್ಲಿ ಭೂ ದಾಖಲೆಗಳ ಜಂಟಿ ನಿರ್ದೇಶಕರ ಸೂಚನೆಯಂತೆ ಪುತ್ತೂರು ಹಾಗೂ ಕಡಬ ತಾಲೂಕಿನ ಭೂ ಮಾಪಕರಿಗೆ ದರ್ಖಾಸ್ತು ಪೋಡಿ ಆಂದೋಲನ, ಇನ್ನಿತರ ವಿಷಯಗಳ ಕುರಿತು ಮಾಹಿತಿ ಮತ್ತು ಕಾರ್ಯಗಾರವು ಜ.3ರಂದು ತಾಲೂಕು ಆಡಳಿತ ಸೌಧದ ತಹಶೀಲ್ದಾರ್ ನ್ಯಾಯಾಲಯದಲ್ಲಿ ನಡೆಯಿತು.
ಮಾಹಿತಿ, ಕಾರ್ಯಾಗಾರವನ್ನು ಉದ್ಘಾಟಿಸಿದ ತಹಶೀಲ್ದಾರ್ ಎಸ್ .ಬಿ.ಕೂಡಲಗಿಯವರು ಮಾತನಾಡಿ, ಭೂ ದಾಖಲೆಗಳ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಉತ್ತಮ ಕಾರ್ಯಾಗಾರ ಆಯೋಜಿಸಿದ ಭೂ ದಾಖಲೆಗಳ ಇಲಾಖೆಯನ್ನು ಅಭಿನಂದಿಸುವುದಾಗಿ ತಿಳಿಸಿದರು
ಪ್ರಭಾಕರ್ ಪಿ.ಕೆ ಮಾತನಾಡಿ, ಇಲಾಖೆಯಲ್ಲಿರುವ ಎಲ್ಲಾ ವಿಚಾರಗಳಿಗೆ ಸಂಬಂಧಿಸಿ ಉತ್ತಮ ಕಾರ್ಯಗಾರವನ್ನು ಆಯೋಜಿಸುವ ಮೂಲಕ ಇಲಾಖೆಯ ಮಾಹಿತಿ ನಿಖರವಾಗಿ ತಿಳಿಸುವಲ್ಲಿ ಫಲಪ್ರದವಾಗಿದ್ದು ಕಾರ್ಯಾಗಾರ ಆಯೋಜಿಸಿದ ಪ್ರಮೋದ್ ಕುಮಾರ್ ಉತ್ತಮ ಕೆಲಸ ಮಾಡಿದ್ದಾರೆ. ಇಂತಹ ಕಾರ್ಯಗಾರಗಳು ವರ್ಷಕ್ಕೆ 4 ಬಾರಿ ಮಾಡಿದಾಗ ಇಲಾಖೆಯ ವಿಸ್ತತ ಮಾಹಿತಿ ದೊರೆಯಲು ಸಹಕಾರಿಯಾಗಲಿದೆ ಎಂದರು.
ಭೂ ದಾಖಲೆಗಳ ಸಹಾಯಕ ನಿರ್ದೇಶಕ ಹೆಚ್.ವಿ ಶ್ರೀನಿವಾಸ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು.ಉಪತಹಶೀಲ್ದಾರ್‌ಗಳಾದ ನಾಗೇಂದ್ರ ನಾಯ್ಕ, ರವಿಕುಮಾರ್, ಕಡಬ ಉಪ ತಹಶೀಲ್ದಾರ್ ಗೋಪಾಲ ಕೆ.ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಾಹಿತಿ, ಕಾರ್ಯಾಗಾರ: ಸಭಾ ಕಾರ್ಯಕ್ರಮದ ಬಳಿಕ ನಡೆದ
ಕಾರ್ಯಾಗಾರದಲ್ಲಿ ಇಲಾಖಾ ಸುತ್ತೋಲೆಯ ಬಗ್ಗೆ ಸಂಪನ್ಮೂಲ ವ್ಯಕ್ತಿ ಪ್ರಮೋದ್ ಕುಮಾರ್ ಮಾತನಾಡಿ, 1977ರ ಜನವರಿ 25ರಿಂದ 2024ರ ನವಂಬರ್ 25ರ ತನಕದ ಭೂ ಮಂಜೂರಾತಿ ಪ್ರಕರಣಗಳ ದರಖಾಸ್ತು ಪೋಡಿ ದುರಸ್ತಿ ಸಂಬಂಧ ನಮೂನೆ1ರಿಂದ5 ಹಾಗೂ ನಮೂನೆ 6ರಿಂದ 10 ಪ್ರಕ್ರಿಯೆ ಸರಳೀಕರಣದ ಬಗ್ಗೆ ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಮುರಳೀಧರ ಶಾನ್‌ಭೋಗ್ ಕುಮ್ಮಿ ಮತ್ತು ಮೂಲಗೇಣಿ, ನಿಷಾದ್ ಪಷಾ ದುರಸ್ತಿ ಬಗ್ಗೆ, ಮಂಜುನಾಥ ಟಿ.ಎಸ್ ಮತ್ತು ಸಂತೋಷ್ ಕೆ ರೋವರ್ ಮತ್ತು ಟೋಟಲ್ ಸ್ಟೇಷನ್ ಬಗ್ಗೆ, ನವೀನ್ ದರಖಾಸ್ತು ಅಳತೆ ಬಗ್ಗೆ, ಉಪತಹಶೀಲ್ದಾರ್ ಗೋಪಾಲ ಕೆ ಬಗರ್ ಹುಕುಂ ಕುರಿತು, ಗಿರಿಗೌಡ ಪರಂಬೋಕು ಮಾರ್ಜಿನ್ ಅಳತೆ ಬಗ್ಗೆ, ಸೌಮ್ಯ 11ಇ-ಮೋಜಿಣಿ ವಿಷಯ ಮತ್ತು ಮೋಹನ ಕೆ.ಜಿಪಿಎಸ್ ಬಗ್ಗೆ ಮಾಹಿತಿ ನೀಡಿದರು.
ಪುತ್ತೂರು ಪರ್ಯಾವೇಕ್ಷಕ ಪ್ರಕಾಶ್ ಬಿ.ಎಸ್ ಸ್ವಾಗತಿಸಿದರು. ಶ್ರೀಕಲಾ ಕಾರ್ಯಕ್ರಮ ನಿರೂಪಿಸಿ, ಕಡಬ ಪರ್ಯಾವೇಕ್ಷಕ ಚಂದ್ರಶೇಖರ ಮೂರ್ತಿ ಎನ್ ವಂದಿಸಿದರು.ರಾಜೇಶ್ ಪಿ., ಚರಣ್, ಮಧು, ಪೂರ್ಣೇಶ್, ಅವಿನಾಶ್, ವಿನಯ್ ಹಾಗೂ ಮಂಜೇಶ್ ರೈ ಅತಿಥಿಳಿಗೆ ಹೂ ನೀಡಿ ಸ್ವಾಗತಿಸಿದರು.



























