ಪುತ್ತೂರು; ಕರ್ನಾಟಕ ರಾಜ್ಯ ವಕ್ಫ್ ಇಲಾಖೆಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ಮೂರು ಮಸೀದಿಗಳಿಗೆ ಒಟ್ಟು 50 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ವಕ್ಫ್ ಅಧೀನದಲ್ಲಿರುವ ಮಸೀದಿಯ ನವೀಕರಣ, ದುರಸ್ಥಿ ಮತ್ತು ಜೀರ್ಣೋಧ್ದಾರಕ್ಕೆ ಈ ಅನುದಾನ ಬಿಡುಗಡೆಯಾಗಿರುತ್ತದೆ.ಬೆಟ್ಟಂಪಾಡಿ ಗ್ರಾಮದ ರೆಂಜ ಫಾರೂಕ್ ಜುಮಾ ಮಸೀದಿ ಮತ್ತು ಖುವ್ವತ್ತುಲ್ ಇಸ್ಲಾಂ ಮದ್ರಸ ಇದರ ಅಭಿವೃದ್ದಿ ಕಾರ್ಯಕ್ಕೆ 20 ಲಕ್ಷ ರೂ, ಬಜತ್ತೂರು ಗ್ರಾಮದ ಮುಹಿಯುದ್ದೀನ್ ಜುಮಾ ಮಸೀದಿ ಹಳೆನೇರಂಕಿ ಇದರ ದುರಸ್ಥಿ ಮತ್ತು ನವೀಕರಣಕ್ಕೆ 15ಲಕ್ಷ ಹಾಗೂ ಶಾಂತಿಗೋಡು ಗ್ರಾಮದ ವೀರಮಂಗಲ ಬದ್ರಿಯಾ ಜುಮಾ ಮಸೀದಿ ಇದರ ದುರಸ್ಥಿಗೆ 15 ಲಕ್ಷ ಅನುದಾನ ಬಿಡುಗಡೆಯಾಗಿದೆ. ಶಾಸಕ ಅಶೋಕ್ ರೈ ಶಿಫಾರಸ್ಸಿನಂತೆ ವಕಫ್ ಇಲಾಖೆಯಿಂದ ಈ ಅನುದಾನ ಬಿಡುಗಡೆಯಾಗಿದೆ.
























