ದಿನಾಂಕ 17-01-2026 ರಂದು ಮಂಗಳೂರು ಪೂರ್ವ ಠಾಣಾಧಿಕಾರಿಯವರಿಗೆ ದೊರೆತ ಖಚಿತ ಮಾಹಿತಿಯಂತೆ ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಪದವು ಗ್ರಾಮದ ಕೈಲಾಸ ಕಾಲೋನಿ ಹತ್ತಿರ ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂದಿರದ ಹಿಂದೆ ಇರುವ ಖಾಲಿ ಜಾಗದಲ್ಲಿ ಯುವಕನೊಬ್ಬನು ಬೈಕ್ ನಲ್ಲಿ ನಿಷೇಧಿತ MDMA ಎಂಬ ಮಾದಕ ವಸ್ತುವನ್ನು ವಶದಲ್ಲಿರಿಸಿಕೊಂಡು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾನೆಂದು ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಗಳ ಜೊತೆ ಸ್ಥಳಕ್ಕೆ ತೆರಳಿ ದಾಳಿ ನಡೆಸಿ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು 5.20 ಗ್ರಾಂ ತೂಕದ MDMA ಮಾದಕ ವಸ್ತು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಪಲ್ಸರ್ ಎನ್.ಎಸ್ ಬೈಕ್ ಸಮೇತ ಒಟ್ಟು ರೂ 70,000/- ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿರುತ್ತಾರೆ.
ಆರೋಪಿಯ ಹೆಸರು:
1.ಜೂಡ್ ಮಾಥ್ಯೂ ಪ್ರಾಯ 20 ವರ್ಷ ತಂದೆ: ಮನೋಜ್ ಜೊಸೆಫ್, ವಾಸ: ಚುನಯಮಕ್ಕಿಲ್ ಹೌಸ್, ಮುತೊಲಪುರಂ, ಎರ್ನಾಕುಲಂ ಕೇರಳ ರಾಜ್ಯ.


























