ಕಾಂಗ್ರೆಸ್ಸಿನ ಹಿಂದೂ ವಿರೋಧಿ ಧೋರಣೆಗಳು ಉಡುಪಿ ಪರ್ಯಾಯ ಮಹೋತ್ಸವದಲ್ಲಿ ಮತ್ತೊಮ್ಮೆ ಹೊರಬಂದಿದೆ. ಓಂಕಾರ ಧ್ವಜದ ಮೂಲಕ ಉಡುಪಿ ಡಿ.ಸಿ ಪರ್ಯಾಯ ಮಹೋತ್ಸವಕ್ಕೆ ಚಾಲನೆ ನೀಡಿದ್ದನ್ನು ಖಂಡಿಸಿ ಕಾಂಗ್ರೆಸ್ ನಾಯಕರು ಪತ್ರ ಬರೆದಿರುವುದು ಕಾಂಗ್ರೆಸ್ ಪಕ್ಷದ ನೀಚ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಇದಕ್ಕೆ ಪೂರಕವಾಗಿ ಮಾಜಿ ಸಚಿವರಾದ ರಮನಾಥ ರೈಗಳ ಹೇಳಿಕೆಯು ಖಂಡನೀಯ. ಮಠ-ದೇವಸ್ಥಾನಗಳ ಆಚರಣೆಗಳಲ್ಲಿ ಭಗವಾಧ್ವಜ, ಓಂಕಾರ ಧ್ವಜ, ಕೇಸರಿ ಧ್ವಜ – ಬಂಟಿಂಗ್ಸ್ ಇವೆಲ್ಲಾ ಸಾಮಾನ್ಯ. ಕೇಸರಿ ಹಾಕಬೇಡಿ ಎನ್ನಲು ಇವರು ಯಾರು? ನಿಮ್ಮ ಈ ಹಿಂದೂ ವಿರೋಧಿ ನೀತಿಗೆ ಬಂಟ್ವಾಳದ ಜನತೆ ನಿಮ್ಮನ್ನು ಮನೆಗೆ ಕಳುಹಿಸಿದ್ದು.
ಮುಸಲ್ಮಾನರ ಮತಕ್ಕಾಗಿ ಕಾಂಗ್ರೆಸ್ ಹಿಂದೂಗಳನ್ನು ಅವಮಾನಿಸುತ್ತಿದೆ. ಪರ್ಯಾಯ ಉತ್ಸವದಲ್ಲಿ ಭಗವತ್ ಧ್ವಜ ಪ್ರಶ್ನಿಸುವ ಕಾಂಗ್ರೆಸ್ ನಾಯಕರಿಗೆ, ಮಸೀದಿಯಲ್ಲಿ, ದರ್ಗಾಗಳ ಉರೂಸ್‌ಗಳಲ್ಲಿ ಹಸಿರು ಧ್ವಜ ಬಳಸಬೇಡಿ ಎಂದು ಕರೆ ನೀಡುವ ತಾಕತ್ತು ಇದೆಯಾ?
ಹಿಂದೂಗಳ ಪರಮ ಪವಿತ್ರವಾದ ಓಂಕಾರ ಧ್ವಜ ಬೇಡ ಎನ್ನುವ ಕಾಂಗ್ರೆಸ್ ನಾಯಕರಿಗೆ ಹಿಂದೂಗಳ ಮತ ಬೇಡ, ಹಿಂದೂ ದೇಗುಲದ ಆದಾಯದ ದುಡ್ಡು ಬೇಡ ಎಂದು ಹೇಳುವ ತಾಕತ್ತು ಇದೆಯಾ?
ಒಂದಂತು ನೆನಪಿರಲಿ, ಮುಸಲ್ಮಾನರ ಸಂಖ್ಯೆ ಒಂದು ಪ್ರದೇಶದಲ್ಲಿ ಹೆಚ್ಚಳವಾದರೆ ಕಾಂಗ್ರೆಸ್ ಪಕ್ಷವನ್ನೇ ಆ ಸಮುದಾಯದ ಜನತೆ ತಿರಸ್ಕರಿಸುತ್ತಾರೆ. ಇತ್ತಿಚೀನ ದಿನಗಳಲ್ಲಿ ಮುಸ್ಲಿಂ ಬಾಹುಳ್ಯದ ಎಷ್ಟು ಪಂಚಾಯಿತಿಗಳಲ್ಲಿ, ಪಾಲಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ ಅಂತ ಒಮ್ಮೆ ತಿರುಗಿ ನೋಡಿ. ನಿಮ್ಮ ಅತಿಯಾದ ತುಷ್ಟೀಕರಣಕ್ಕೆ ನೀವೇ ಬಲಿಯಾಗುವುದು. ಸನಾತನ ಧರ್ಮದ ನಂಬಿಕೆ ಮತ್ತು ಆಚರಣೆಗಳಿಗೆ ಅಡ್ಡಿ ಬರುವ ನೀಚ ಬುದ್ಧಿಯನ್ನು ಇನ್ನಾದರೂ ಬಿಡಿ.


























