ಪುತ್ತೂರು: ವಿಷ ಪದಾರ್ಥ ಸೇವಿಸಿ ಅಸ್ವಸ್ಥರಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಬೆಟ್ಟಂಪಾಡಿಯ ಯುವಕರೋರ್ವರು ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ.
ಬೆಟ್ಟಂಪಾಡಿ ಗ್ರಾಮದ ತಲೆಪ್ಪಾಡಿ ನಿವಾಸಿ ಆಶ್ರಫ್ ಕೆ ಅವರ ಪುತ್ರ ಮೊಹಮ್ಮದ್ ಸುಹೈಬ್ (19) ಮೃತಪಟ್ಟವರು.
ಮೊಹಮ್ಮದ್ ಸುಹೈಬ್ ಅವರು ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು ಜ.28ರಂದು ಬೆಳಗ್ಗೆ ಯಾವುದೋ ಕಾರಣದಿಂದ ಮನನೊಂದು ಇಲಿ ಪಾಷಣ ಸೇವಿಸಿದ್ದರು. ವಿಚಾರ ತಿಳಿದ ತಂದೆ ಅಶ್ರಫ್ ಅವರು ತಕ್ಷಣ ಪುತ್ತೂರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ಮಂಗಳೂರು ಪಾದರ್ ಮುಲ್ಲಾರ್ ಆಸ್ಪತ್ರೆಗೆ ದಾಖಲಿಸಿದ್ದರು.
ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ಫೆ.2ರಂದು ನಿಧನರಾದರು ಎಂದು ವರದಿಯಾಗಿದೆ.

























