ಪುತ್ತೂರು: ತೆಂಗಿನ ಮರವೊಂದು ಮುಖ್ಯ ರಸ್ತೆಗೆ ಬಿದ್ದು ವಿದ್ಯುತ್ ತಂತಿಗೆ ಹಾನಿಯಾದ ಘಟನೆ ಮುಖ್ಯ ರಸ್ತೆಯ ಏಳ್ಮುಡಿ ಬಳಿ ನಡೆದಿದೆ.
ಹಲವಾರು ವಾಹನಗಳು ಚಲಿಸುವ ಮುಖ್ಯ ರಸ್ತೆಗೆ ಮರ ಬಿದ್ದಿದ್ದು ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಿಲ್ಲ ಎಂದು ತಿಳಿದು ಬಂದಿದೆ. ನಗರಸಭಾ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಮರವನ್ನು ತೆರವುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

























