ಮಾಣಿ : ಮಾಣಿ ಗ್ರಾಮವನ್ನು ಕೊರೊನಾ ಮುಕ್ತ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ “ಶ್ರೀಶಾರದಾ ಯುವ ವೇದಿಕೆ” ಮಾಣಿ ಇದರ ವತಿಯಿಂದ ‘ಕೊರೊನಾ ಮುಕ್ತ ಅಭಿಯಾನಕ್ಕೆ ನಿಮ್ಮ ಜೊತೆ ನಾವಿದ್ದೇವೆ’ ಎಂಬ ಪರಿಕಲ್ಪನೆಯಡಿಯಲ್ಲಿ ಗ್ರಾಮದ ಪ್ರತಿ ಮನೆಗಳಿಗೆ ತೆರಳಿ ಕರಪತ್ರ ನೀಡುವ ಮೂಲಕ ಕೊರೊನಾ ನಿರ್ವಹಣೆ ಮತ್ತು ಲಸಿಕೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಜೂ.23 ರಂದು ಅಧಿಕೃತವಾಗಿ ಚಾಲನೆ ನೀಡಲಾಯಿತು.
ಶ್ರೀಶಾರದಾ ಯುವ ವೇದಿಕೆ ವತಿಯಿಂದ ‘ನಿಮ್ಮ ಜೊತೆ ನಾವಿದ್ದೇವೆ’ ಎಂಬ ಪರಿಕಲ್ಪನೆಯೊಂದಿಗೆ ಮಾಣಿ ಗ್ರಾಮವನ್ನು ಕೊರೊನಾ ಮುಕ್ತ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಗ್ರಾಮದ ಎಲ್ಲಾ ಮನೆಗಳಿಗೆ ತೆರಳಿ ಕರಪತ್ರ ನೀಡಿ,ಕೊರೊನಾ ನಿರ್ವಹಣೆ ಮತ್ತು ಲಸಿಕೆಯ ಬಗ್ಗೆ ಮಾಹಿತಿ ನೀಡಿ ಜನರಲ್ಲಿ ಕೊರೊನಾ ಬಗೆಗಿನ ಆತಂಕವನ್ನು ದೂರಗೊಳಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಶ್ರೀಶಾರದಾ ಯುವ ವೇದಿಕೆಯ ಅಧ್ಯಕ್ಷರಾದ ಭರತ್ ಶೆಟ್ಟಿ ಯವರು ಹೇಳಿದರು.
ಈ ಸಂದರ್ಭದಲ್ಲಿ ನೇರಳಕಟ್ಟೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಪುಷ್ಪರಾಜ್ ಚೌಟ ಮಾಣಿ, ಶಾರದಾ ಯುವ ವೇದಿಕೆ ಸಂಘಟನಾ ಕಾರ್ಯದರ್ಶಿ ನರಸಿಂಹ ಶೆಟ್ಟಿ ಮಾಣಿ, ಶಾರದಾ ಯುವ ವೇದಿಕೆ ಕೋಶಾಧಿಕಾರಿ ಪ್ರತಾಪ್ ಆಳ್ವ,ಸದಸ್ಯರಾದ ಪುರುಷೋತ್ತಮ ಚೌಟ ಮತ್ತು ಪ್ರಮೀತ್ ಶೆಟ್ಟಿ ಕೊಡಾಜೆ ಉಪಸ್ಥಿತರಿದ್ದರು.