ಕಂಡಿಪ್ಪಾಡಿ : ಪೆರುವಾಜೆ ಗ್ರಾಮದ ಕಂಡಿಪ್ಪಾಡಿ ಕುಟುಂಬದ ಧರ್ಮದೈವ ಮತ್ತು ಪರಿವಾರ ದೈವಗಳ ನೇಮವು ಫೆ.7 ಮತ್ತು 8 ರಂದು ಕಂಡಿಪ್ಪಾಡಿ ತರವಾಡಿನಲ್ಲಿ ವಿಜೃಂಭಣೆಯಿಂದ ನಡೆಯಿತು.
ಫೆ.7 ರಂದು ಸಂಜೆ 6.30 ಕ್ಕೆ ಭಂಡಾರ ತೆಗೆದು ಅನ್ನಸಂತರ್ಪಣೆ, ರಾತ್ರಿ 10.30 ರಿಂದ ಜ್ಯಾವತೆ ಮತ್ತು ಕಲ್ಲುರ್ಟಿ, ವರ್ಣಾರ ಪಂಜುರ್ಲಿ, ಕುಪ್ಪೆ ಪಂಜುರ್ಲಿ ದೈವಗಳ ನೇಮ ನಡೆಯಿತು. ಫೆ.8 ರಂದು ಧರ್ಮದೈವ ರುದ್ರಚಾಮುಂಡಿ ನೇಮ ನಡೆದು ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಿತು.

ಈ ಸಂದರ್ಭದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಡಾ. ನರಸಿಂಹ ಶರ್ಮ ಕಾನಾವು ಹಾಗೂ ಮಬೆಯವರು, ನರಸಿಂಹ ತೇಜಸ್ವಿ ಕಾನಾವು, ಡಾ.ರಾಮಕಿಶೋರ್ ಹಾಗೂ ಮನೆಯವರು,
ಕುಂಬ್ರ ದಯಾಕರ ಆಳ್ವ, ರಾಮಚಂದ್ರ ಕೋಡಿಬೈಲು, ಪದ್ಮನಾಭ ಶೆಟ್ಟಿ ಪೆರುವಾಜೆ, ಜಯಸೂರ್ಯ ರೈ ಬೋರಡ್ಕ,
ಸಂಪತ್ ಕುಮಾರ್ ರೈ ಪಾತಾಜೆ, ದಯಾನಂದ ಗೌಡ ಜಾಲು, ಯಶವಂತ ಜಾಲು, ಸಂಜೀವ ಗೌಡ ಬೈಲಂಗಡಿ, ಕುಶಾಲಪ್ಪ ಎನ್, ನಾರಾಯಣ ಕೊಂಡೆಪ್ಪಾಡಿ, ಕಂಡಿಪ್ಪಾಡಿ ತರವಾಡು ಮನೆಯ ದಾಮೋದರ ಗೌಡ, ಮಂಜುನಾಥ ಗೌಡ ಕಂಡಿಪ್ಪಾಡಿ, ಜನಾರ್ದನ ಗೌಡ ಕಂಡಿಪ್ಪಾಡಿ, ಸೋಮನಾಥ ಗೌಡ ಕಂಡಿಪ್ಪಾಡಿ, ಚಂದ್ರಶೇಖರ ಗೌಡ ಅಂಕಜಾಲು, ಸತ್ಯಪ್ರಸಾದ್ ಕಂಡಿಪ್ಪಾಡಿ, ಕೇಶವ ಕೆ.ಎನ್ ಕಂಡಿಪ್ಪಾಡಿ, ಬಾಲಕೃಷ್ಣ ಗೌಡ ಕಂಡಿಪ್ಪಾಡಿ, ಶಿವಪ್ಪ ಗೌಡ ಬಾರೆಗುರಿ, ಸುಬ್ರಾಯ ಗೌಡ ಬಾರೆಗುರಿ ಹಾಗೂ ಕುಟುಂಬಸ್ಥರು, ಹಾಗೂ ಊರ ಗಣ್ಯರು ಉಪಸ್ಥಿತರಿದ್ದರು.





























